ಸಿನಿಮಾ ಸುದ್ದಿ

ರಾಘಣ್ಣ ನಟನೆಯ 25ನೇ ಥ್ರಿಲ್ಲರ್ ಸಿನಿಮಾ 'ಆಡಿಸಿದಾತ'!

1974 ರಲ್ಲಿ ತೆರೆಕಂಡ ಶ್ರೀನಿವಾಸ ಕಲ್ಯಾಣ ಮೂಲಕ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಾಘವೇಂದ್ರ ರಾಜ್ ಕುಮಾರ್ 25ನೇ ಸಿನಿಮಾ ಥ್ರಿಲ್ಲರ್ ಮೂವಿ ಆಗಲಿದೆ...

ರಾಘಣ್ಣ ನಟನೆಯ 25ನೇ ಥ್ರಿಲ್ಲರ್ ಸಿನಿಮಾ 'ಆಡಿಸಿದಾತ'!
ರಾಘವೇಂದ್ರ ರಾಜ್ ಕುಮಾರ್
Published On :
1974 ರಲ್ಲಿ ತೆರೆಕಂಡ ಶ್ರೀನಿವಾಸ ಕಲ್ಯಾಣ ಮೂಲಕ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಾಘವೇಂದ್ರ ರಾಜ್ ಕುಮಾರ್ 25ನೇ ಸಿನಿಮಾ ಥ್ರಿಲ್ಲರ್ ಮೂವಿ ಆಗಲಿದೆ.
ಅಮ್ಮನ ಮನೆ ಸಿನಿಮಾದಿಂದ ನಟ ರಾಘವೇಂದ್ರ ರಾಜ್​ಕುಮಾರ್ ಪುನಃ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಅವರ ಮತ್ತೊಂದು ಸಿನಿಮಾ ‘ತ್ರಯಂಬಕಂ’ ಏ.19ಕ್ಕೆ ತೆರೆಕಾಣುವುದಕ್ಕೆ ಸಿದ್ಧವಾಗಿದೆ. ಇದರ ಜತೆಗೆ ಧ್ರುವ ಸರ್ಜಾ ಜತೆಗೆ ‘ಪೊಗರು’ ಚಿತ್ರದಲ್ಲೂ ರಾಘಣ್ಣ ಭಾಗಿಯಾಗಿದ್ದಾರೆ. ಇದೆಲ್ಲದರ ಮಧ್ಯೆ ಅವರ 25ನೇ ಸಿನಿಮಾದ ಕುರಿತ ಮಾಹಿತಿಯೊಂದು ಹೊರಬಿದ್ದಿದೆ. ಆ ಚಿತ್ರಕ್ಕೆ ‘ಆಡಿಸಿದಾತ’ ಎಂದು ನಾಮಕರಣ ಮಾಡಲಾಗಿದೆ.
‘ಆಡಿಸಿದಾತ’ ಶೀರ್ಷಿಕೆ ಕೇಳುತ್ತಲೇ ಡಾ. ರಾಜ್​ಕುಮಾರ್ ಅಭಿನಯದ ಮಹೋನ್ನತ ಸಿನಿಮಾ ‘ಕಸ್ತೂರಿ ನಿವಾಸ’ ನೆನಪಾಗುತ್ತದೆ. ಆ ಚಿತ್ರದ ‘ಆಡಿಸಿದಾತ ಬೇಸರ ಮೂಡಿ..’ ಹಾಡು ಇಂದಿಗೂ ಫೇಮಸ್. ಇದೀಗ ಆ ಹಾಡಿನ ಮೊದಲ ಪದವನ್ನೇ ತೆಗೆದುಕೊಂಡು ಶೀರ್ಷಿಕೆ ಮಾಡಲಾಗಿದೆ. ಅದು ರಾಘಣ್ಣ ನಟಿಸಲಿರುವ 25ನೇ ಸಿನಿಮಾಕ್ಕೆ ಎಂಬುದು ವಿಶೇಷ.
ಮಾರ್ಚ್ 25ಕ್ಕೆ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದ್ದು, ಇದೊಂದು ಥ್ರಿಲ್ಲರ್ ಕಥೆಯಾಧರಿತ ಸಿನಿಮಾ ಆಗಿರಲಿದೆಯಂತೆ. ಹರೀಶ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಅಂದಾಜು 30 ದಿನ ಚಿತ್ರೀಕರಣ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.