ಸಿನಿಮಾ ಸುದ್ದಿ

ಹೋಟೆಲ್ ಬಿಲ್ ಪಾವತಿಸದೆ ಕಾಲ್ಕಿತ್ತಿರುವ ಆರೋಪ: ಗಾಳಿಸುದ್ದಿ ನಂಬಬೇಡಿ- ಪೂಜಾ ಗಾಂಧಿ

ಸ್ಯಾಂಡಲ್ ವುಡ್ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ಖಾಸಗಿ ಹೋಟೆಲ್ ನ ಬಿಲ್ ಪಾವತಿಸದೆ ಕಾಲ್ಕಿತ್ತಿರುವ ಆರೋಪ ಕೇಳಿಬಂದಿದೆ. ಆದರೆ ತಾವು ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ, ಗಾಳಿಸುದ್ದಿಯನ್ನು ನಂಬಬೇಡಿ ಎಂದು ಪೂಜಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಹೋಟೆಲ್ ಬಿಲ್ ಪಾವತಿಸದೆ ಕಾಲ್ಕಿತ್ತಿರುವ ಆರೋಪ: ಗಾಳಿಸುದ್ದಿ ನಂಬಬೇಡಿ- ಪೂಜಾ ಗಾಂಧಿ
ಪೂಜಾ ಗಾಂಧಿ
Published On :
ಬೆಂಗಳೂರು: ಸ್ಯಾಂಡಲ್ ವುಡ್ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ಖಾಸಗಿ ಹೋಟೆಲ್ ನ ಬಿಲ್ ಪಾವತಿಸದೆ ಕಾಲ್ಕಿತ್ತಿರುವ ಆರೋಪ ಕೇಳಿಬಂದಿದೆ.  ಆದರೆ ತಾವು ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ, ಗಾಳಿಸುದ್ದಿಯನ್ನು ನಂಬಬೇಡಿ ಎಂದು ಪೂಜಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ನಟಿ ಪೂಜಾ ಗಾಂಧಿ ಈ ಹಿಂದೆ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯವಿದ್ದು, ಬಿಲ್ ಕಟ್ಟದೆ ಸತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಮೂಲಗಳ ಪ್ರಕಾರ ಮಾರ್ಚ್​ 11ರಂದೇ ಪೂಜಾ ಗಾಂಧಿ ವಿರುದ್ದ ದೂರು ದಾಖಲಾಗಿದ್ದು, ಪೂಜಾ ಗಾಂಧಿ ವಿರುದ್ಧ ಬರೋಬ್ಬರಿ 3 ಲಕ್ಷದ 53 ಸಾವಿರ ರೂ. ಬಿಲ್ ಕಟ್ಟದೆ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಂಚನೆ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಹೆಸರೂ ಕೂಡ ಕೇಳಿ ಬಂದಿದ್ದು, ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್​ ಪಿ. ಮೆಣಸಿನಕಾಯಿ ಒಂದು ವರ್ಷ ದಿ ಲಲಿತ್ ಅಶೋಕದಲ್ಲೇ ವಾಸ್ತವ್ಯ ಹೂಡಿದ್ದು, ಅಲ್ಲಿಂದ ಸೇವೆಯನ್ನು ಪಡೆದುಕೊಂಡಿದ್ದಾರೆ.
ಕಳೆದ  2016 ರ ಏಪ್ರಿಲ್‍ನಿಂದ ಮಾರ್ಚ್ 2017 ರವರೆಗೆ ಬರೋಬ್ಬರಿ 1 ವರ್ಷ ಕೊಠಡಿ ಬುಕ್ ಮಾಡಿದ್ದರು. ಇದಕ್ಕಾಗಿ ಇವರು ಹೋಟೆಲ್​ಗೆ 26.22 ಲಕ್ಷ ಹಣ ಪಾವತಿಸಬೇಕಿತ್ತು. ಅದರಲ್ಲಿ  ಕೇವಲ   22.83 ಲಕ್ಷ ಪಾವತಿಸಲಾಗಿದ್ದು, 3.53 ಲಕ್ಷ ಬಾಕಿ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಿಲ್ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿ ಯುಎನ್ಐ ಕನ್ನಡ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಪೂಜಾ ಗಾಂಧಿ, ತಾವು ಚಿತ್ರೀಕರಣವೊಂದರ ಸಂದರ್ಭದಲ್ಲಿ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದು ನಿಜ. ಆದರೆ ಬಾಕಿ ಉಳಿಸಿಕೊಂಡಿಲ್ಲ. ಈ ಸಂಬಂಧ  ಇಂದು ಪೊಲೀಸ್ ಠಾಣೆ ಗೆ ತೆರಳಿ ಮೂರನೇ ವ್ಯಕ್ತಿಯೊಬ್ಬರ ಮಾಡಿರುವ ಆರೋಪಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.