ಸಿನಿಮಾ ಸುದ್ದಿ

ಭರಾಟೆ ಕ್ಲೈಮ್ಯಾಕ್ಸ್ ನಲ್ಲಿ ಶ್ರೀಮುರಳಿ ಎದುರು 9 ವಿಲನ್ ಗಳು!

ಭರಾಟೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಾಯಕ ನಟ ಶ್ರೀಮುರಳಿ 9 ವಿಲನ್ ಗಳ ಜೊತೆ ಹೊಡೆದಾಡಬೇಕಿದೆ...

ಭರಾಟೆ ಕ್ಲೈಮ್ಯಾಕ್ಸ್ ನಲ್ಲಿ ಶ್ರೀಮುರಳಿ ಎದುರು 9 ವಿಲನ್ ಗಳು!
ಶರತ್ ಲೋಹಿತಾಶ್ವ, ಸಾಯಿ ಕುಮಾರ್, ಅವಿನಾಶ್, ರವಿ ಶಂಕರ್, ಅಯ್ಯಪ್ಪ ಶರ್ಮ
Published On :
ಭರಾಟೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಾಯಕ ನಟ ಶ್ರೀಮುರಳಿ 9 ವಿಲನ್ ಗಳ ಜೊತೆ ಹೊಡೆದಾಟ ನಡೆಸಬೇಕಿದೆ. ಒಟ್ಟಿಗೆ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಫೈಟಿಂಗ್ ಸೀನ್ ನ್ನು ಕೊರಿಯಾಗ್ರಫರ್ ರವಿ ವರ್ಮ ನೆಲಮಂಗಲದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.
ಚಿತ್ರೀಕರಣದ ಕೆಲ ಫೋಟೋಗಳು ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು ಅದರಲ್ಲಿ ಸಾಯಿ ಕುಮಾರ್, ಕವಿಶಂಕರ್, ಅಯ್ಯಪ್ಪ ಶರ್ಮ, ಅವಿನಾಶ್, ಶರತ್ ಲೋಹಿತಾಶ್ವ, ರಾಜು ವಾಡೆ, ಮನಮೋಹನ್, ಉಗ್ರಂ ಮಂಜು ಮತ್ತು ದೀಪಕ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಇಲ್ಲಿ ನಟರು ಮಾತ್ರವಲ್ಲದೆ 50 ನುರಿತ ಪೈಲ್ವಾನರು ಮತ್ತು ಬಾಡಿ ಬಿಲ್ಡರ್ ಗಳನ್ನು ಸಹ ಕರೆತರಲಾಗಿದೆ. ಚೇತನ್ ಕುಮಾರ್ ನಿರ್ದೇಶನದ ಚಿತ್ರದ ಈ ದೃಶ್ಯಕ್ಕೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಸೆಟ್ ನ್ನು ಹಾಕಲಾಗಿದೆ. ಸುಪ್ರೀತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.