ಸಿನಿಮಾ ಸುದ್ದಿ

'ಪ್ರಾರಂಭ'ಕ್ಕಾಗಿ ಕಲಾವಿದನ ಕುಂಚ ಹಿಡಿದ ಮನೋರಂಜನ್!

ಮನೋರಂಜನ್ ಅವರ ಮುಂಬರುವ ಚಿತ್ರ "ಪ್ರಾರಂಭ"ಗಾಗಿ ಎರಡು ಶೆಡ್ಯೂಲ್ ಗಳನ್ನು ಈಗಾಗಲೇ ಮುಗಿಸಿದ್ದಾರೆ.. 'ಲವ್ ಲೈಫ್ ಸ್ಟಾರ್ಟ್' ಎನ್ನುವ ಅಡಿಬರಹವಿರುವ ಈ ಚಿತ್ರಕ್ಕೆ ಮನು ಕಲ್ಯಾಡಿ....

'ಪ್ರಾರಂಭ'ಕ್ಕಾಗಿ ಕಲಾವಿದನ ಕುಂಚ ಹಿಡಿದ ಮನೋರಂಜನ್!
ಮನೋರಂಜನ್
Published On :
ಬೆಂಗಳೂರು: ಮನೋರಂಜನ್ ಅವರ ಮುಂಬರುವ ಚಿತ್ರ "ಪ್ರಾರಂಭ" ಗಾಗಿ ಎರಡು ಶೆಡ್ಯೂಲ್ ಗಳನ್ನು ಈಗಾಗಲೇ ಮುಗಿಸಿದ್ದಾರೆ.  'ಲವ್ ಲೈಫ್ ಸ್ಟಾರ್ಟ್' ಎನ್ನುವ ಅಡಿಬರಹವಿರುವ ಈ ಚಿತ್ರಕ್ಕೆ ಮನು ಕಲ್ಯಾಡಿ ಚಿತ್ರಕಥೆ ಬರೆದು ನಿರ್ದೇಶನವ ಮಾಡಿದ್ದಾರೆ. ಮನು ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ ಎನ್ನುವ್ದು ಗಮನಾರ್ಹ. ಮನೋರಂಜನ್ ಈ ಚಿತ್ರದಲ್ಲಿ ಮಂಥನ್ ಎನ್ನುವ ಕಲಾವಿದನ ಪಾತ್ರದಲ್ಲಿ ಕಾಣಿಸಲಿಉಇದ್ದಾರೆ.
ಎರಡು ಶೇಡ್ ಗಳಿರುವ ನಾಯಕನ ಪಾತ್ರದ ಒಂದು ಚಿತ್ರವನ್ನು ಚಿತ್ರತಂಡ ಹಂಚಿಕೊಂಡಿದ್ದುಇದರಲ್ಲಿನ ವಿಶೇಹ ಚಿತ್ರಕಥೆಗಾಗಿಯೇ ಮನೋರಂಜನ್ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಚಿತ್ರದ ಮೂಲಕ ಕೀರ್ತಿ ಕಲಾಕೇರಿ ತನ್ನ ಹೊಸ ನಟನಾ ಜೀವನವನ್ನು ಪ್ರಾರಂಭಿಸುತ್ತಿದ್ದಾರೆ.
ಇನ್ನೂ ಒಂದು ಹಂತದ ಚಿತ್ರೀಕರಣ ಬಾಕಿ ಇರುವ ಕಾರಣ ಇನ್ನೊಂದು ತಿಂಗಳಿನಲ್ಲಿ ಆಡಿಯೋ ಲಾಂಚ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.ಜೇನುಶ್ರೀ ತನುಷ ಪ್ರೊಡಕ್ಷನ್ ಲಾಂಛನದಲ್ಲಿ ಚಿತ್ರ ತಯಾರಾಗುತ್ತಿದೆ.ಪ್ರಜ್ವಲ್ ಪಾಲ್ ಸಂಗೀತ, ಸುರೇಶ್  ಬಾಬು ಛಾಯಾಗ್ರಹಣವಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.