ಕನ್ನಡಕ್ಕೆ ಬಂದ ವಿಜಯ್ ದೇವರಕೊಂಡ: ಮತ್ತೆ ಒಂದಾಯ್ತು ’ಗೀತಾ ಗೋವಿಂದಂ’ ಜೋಡಿ
‘ಗೀತಾ ಗೋವಿಂದಂ’ ಚಿತ್ರದ ಮೂಲಕ ಮೋಡಿ ಮಾಡಿದ್ದ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಇದೀಗ ಕನ್ನಡ ಚಿತ್ರರಸಿಕರ ಮನಗೆಲ್ಲಲು ಸಿದ್ದವಾಗಿದೆ. ವಿಜಯ್.....

Published On :
ಹೈದರಾಬಾದ್: ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಮೋಡಿ ಮಾಡಿದ್ದ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಇದೀಗ ಕನ್ನಡ ಚಿತ್ರರಸಿಕರ ಮನಗೆಲ್ಲಲು ಸಿದ್ದವಾಗಿದೆ. ವಿಜಯ್ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೇಡ್’’ ಚಿತ್ರ ಕನ್ನಡದಲ್ಲಿ ಸಹ ತೆರೆಕಾಣಲಿದೆ. ಈ ಮೂಲಕ ವಿಜಯ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ವಿಭಿನ್ನ ಕಥಾಹಂದರದ ಈ ಚಿತ್ರವು ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ. ಮೇ 22ರಂದುತೆರೆ ಕಾಣಲಿರುವ ಈ ಚಿತ್ರದ ಟೀಸರ್ ಸಹ ನಾಲ್ಕು ಭಾಷೆಗಳಲ್ಲಿ ಬರಲಿದೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್, ಬಿಗ್ ಬೆನ್ ಸಿನಿಮಾಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದು ವಿಜಯ್ ವೈದ್ಯಕೀಯ ವಿದ್ಯಾರ್ಥಿಯಾಗಿಯೂ ರಶ್ಮಿಕಾ ಕ್ರಿಕೆಟರ್ ಆಗಿಯೂ ತೆರೆ ಮೇಲೆ ಕಾಣಿಸಲಿದ್ದಾರೆ.
ಚಿತ್ರದ ಪೋಸ್ಟರ್ ಇದಾಗಲೇ ಬಿಡುಗಡೆಯಾಗಿದ್ದು ಇದೊಂದು ಪಕ್ಕಾ ಪ್ರೇಮಕಥಾನಕವಾಗಿದೆ ಎಂದು ಹೇಳಲಾಗಿದೆ.
‘ಗೀತಾ ಗೋವಿಂದಂ’ ಮೂಲಕ ಖ್ಯಾತಿಗಳಿಸಿರುವ ವಿಜಯ್-ರಶ್ಮಿಕಾ ಜೋಡಿ ‘ಡಿಯರ್ ಕಾಮ್ರೇಡ್’ ನಲ್ಲಿಯೂ ಅಷ್ಟೇ ಯಶಸ್ವಿಯಾಗಲಿದೆಯೆ ಎನ್ನುವುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rashmika Mandannaರಶ್ಮಿಕಾ ಮಂದಣ್ಣವಿಜಯ್ ದೇವರಕೊಂಡGeetha GovindamVijay DeverakondaDear Comradeಗೀತಾ ಗೋವಿಂದಂ ಡಿಯರ್ ಕಾಮ್ರೇಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


