ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲು 'ಉಲ್ಲಾಸ ಉತ್ಸಾಹ' ನೆರವು: ಯಾಮಿ ಗೌತಮ್
ಯಾಮಿ ಗೌತಮ್ ಬಾಲಿವುಡ್ ನ ದೊಡ್ಡ ನಟಿಯಾಗಿದ್ದರೂ, ಕನ್ನಡ ಪ್ರೇಕ್ಷಕರಿಗೆ ಯಾವಾಗಲೂ ಅವರು ಉಲ್ಲಾಸ ಉತ್ಸಾಹದ ಹುಡುಗಿಯಾಗಿಯೇ ನೆನಪಿಯಲ್ಲಿ ಉಳಿದಿದ್ದಾರೆ.

Published On :
ಯಾಮಿ ಗೌತಮ್ ಬಾಲಿವುಡ್ ನ ದೊಡ್ಡ ನಟಿಯಾಗಿದ್ದರೂ, ಕನ್ನಡ ಪ್ರೇಕ್ಷಕರಿಗೆ ಯಾವಾಗಲೂ ಅವರು ಉಲ್ಲಾಸ ಉತ್ಸಾಹದ ಹುಡುಗಿಯಾಗಿಯೇ ನೆನಪಿಯಲ್ಲಿ ಉಳಿದಿದ್ದಾರೆ.
ಬಾಲಿವುಡ್ ನ ಬ್ಲಾಕ್ ಬೂಸ್ಟರ್ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದ ನಾಯಕಿ ಯಾಮಿ ಗೌತಮ್ 2009ರಲ್ಲಿ ಗಣೇಶ್ ಜೊತೆಗೆ ಉಲ್ಲಾಸ- ಉತ್ಸಾಹ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು.
ನಂತರ ಕನ್ನಡದತ್ತ ಹಿಂದಿರುಗಿ ನೋಡದ ಯಾಮಿ ಗೌತಮಿ,ಕಾರ್ಯಕ್ರಮವೊಂದರ ಅಂಗವಾಗಿ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.
ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಅನುಭವವಾಗಿತ್ತು. ಗಣೇಶ್ ಜೊತೆಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದೆ, ನಂತರ ಯಾವ ಹಿರೋ ಜೊತೆಗೆ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಗಣೇಶ್ ನಿಜವಾಗಲೂ ಉತ್ತಮ ಪ್ರೋತ್ಸಾಹಕರು, ಈಗಲೂ ಅವರು ಅದೇ ರೀತಿಯಲ್ಲಿದ್ದಾರೆ,ಉತ್ತಮ ಕಥೆ, ಪಾತ್ರ ದೊರೆತರೆ, ಕನ್ನಡ ಚಿತ್ರರಂಗಕ್ಕೆ ಮರಳಿ ಬರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


