'ರಾಮಾಚಾರಿ' ಚಿತ್ರದಲ್ಲಿನ ಒಂದು ಹಾಡಿನಂತೆ ನಮ್ಮ ಜೀವನದಲ್ಲಿಯೂ ಆಯಿತು: ರಾಧಿಕಾ ಪಂಡಿತ್
ಮತ್ತೊಮ್ಮೆ ತಂದೆ-ತಾಯಿಯಾಗುವ ವಿಚಾರವನ್ನು ಕನ್ನಡ ಸಿನಿಲೋಕದ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಹಿರಂಗಗೊಳಿಸುತ್ತಿದ್ದಂತೆ ಸೋಷಿಯಲ್ ...

Published On :
ಬೆಂಗಳೂರು: ಮತ್ತೊಮ್ಮೆ ತಂದೆ-ತಾಯಿಯಾಗುವ ವಿಚಾರವನ್ನು ಕನ್ನಡ ಸಿನಿಲೋಕದ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಹಿರಂಗಗೊಳಿಸುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿ ಟ್ರೋಲ್ ಕೂಡ ಆಗಿದೆ.
ಮೊದಲ ಮಗುವಿಗೆ ಈಗಷ್ಟೇ 6 ತಿಂಗಳು ತುಂಬಿದ್ದು ಇತ್ತೀಚಿಗೆ ನಾಮಕರಣ ಮಾಡಿ ಆಯ್ರಾ ಯಶ್ ಎಂದು ಹೆಸರಿಟ್ಟಿದ್ದರು. ಇದೀಗ ಮತ್ತೊಮ್ಮೆ ಗರ್ಭಿಣಿಯಾಗಿರುವ ಕುರಿತು ರಾಧಿಕಾ ಪಂಡಿತ್ ಮಾತನಾಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ಆದಿಲಕ್ಷ್ಮಿ ಪುರಾಣ ಚಿತ್ರದ ಪ್ರೆಸ್ ಮೀಟ್ ನಡೆಯಿತು. ಅದರಲ್ಲಿ ಮಾಧ್ಯಮದವರು ಎರಡನೇ ಮಗುವಿನ ಬಗ್ಗೆ ಕೇಳಿದಾಗ ನಾವಿಬ್ಬರು ಅಭಿನಯಿಸಿದ ರಾಮಚಾರಿ ಸಿನಿಮಾದಲ್ಲಿ ಒಂದು ಹಾಡಿದೆ. ಅದರಂತೆ ನಮ್ಮ ಜೀವನದಲ್ಲಿ ಆಗಿದೆ, ಅಷ್ಟೆ ಎಂದು ಹೇಳಿ ಅಲ್ಲಿಗೆ ನಿಲ್ಲಿಸಿ ನಕ್ಕರು.
ನಾನು ಬಹಳ ಲಕ್ಕಿ ಎನಿಸುತ್ತಿದೆ. ಮತ್ತೊಮ್ಮೆ ನಮ್ಮ ಜೀವನದಲ್ಲಿ ಒಳ್ಳೆಯ ಘಟನೆ ಮರುಕಳಿಸುತ್ತಿದೆ. ದೇವರ ಆಶೀರ್ವಾದದಿಂದ ಒಳ್ಳೆಯದಾಗುತ್ತಿದ್ದು, ಮುಂದಿನ ಉತ್ತಮ ದಿನಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದರು.
ಮಕ್ಕಳು ಅಂದರೇನೆ ಖುಷಿ. ಆದ್ದರಿಂದ ಗಂಡು ಮಗು, ಹೆಣ್ಣು ಮಗು ಅಂತಾ ಯಾವುದೇ ವ್ಯತ್ಯಾಸ ಮಾಡೋದಿಲ್ಲ. ವೈದ್ಯರ ಸಲಹೆ ಪಡೆದು ಎಲ್ಲವೂ ಓಕೆ ಎಂದ ಮೇಲೆಯೇ ನಾವು ಮತ್ತೊಂದು ಮಗುವಿಗೆ ಸಿದ್ಧವಾಗಿರೋದು ಎಂದು ಹೇಳಿದರು. ಅಲ್ಲದೇ ವೈರಲ್ ಆಗ್ತಿರೋ ಮಗಳ ವೀಡಿಯೋಗೆ ರವಿ ಬಸ್ರೂರು ಮಗಳ ಸಾಂಗ್ ಕಂಪೋಸ್ ಮಾಡಿದ್ದರು ಅನ್ನೋದನ್ನು ಸಹ ಇದೇ ವೇಳೆ ರಾಧಿಕಾ ಹೇಳಿದ್ರು.
ಮಗಳಿಗೆ ಲಕ್ಷ್ಮೀ ದೇವರ ಹೆಸರಿನಲ್ಲೇ ನಾಮಕರಣ ಮಾಡೋಕೆ ಚಿಂತಿಸಿದ್ದೆವು. ಆಯ್ರ ಲಕ್ಷ್ಮಿ ದೇವತೆಯ ಹೆಸರು. ಈ ಹೆಸರು ಇಡಲು ತುಂಬಾ ಟೈಂ ತೆಗೆದುಕೊಂಡಿದ್ವಿ. ಮಗಳು ಹುಟ್ಟಿದ ಮೇಲೆ ಎಲ್ಲವೂ ಒಳ್ಳೆಯದಾಯಿತು ಎಂದರು.
ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅಭಿನಯದ ಯಾವ ಚಿತ್ರವೂ ಅವರ ಮದುವೆ ನಂತರ ತೆರೆಕಂಡಿರಲಿಲ್ಲ. ಇದೀಗ, 2 ವರ್ಷದ ನಂತರ ಮತ್ತೆ ಬಣ್ಣ ಹಚ್ಚಿದ್ದು, 'ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿ ಜೊತೆ 'ಆದಿ ಲಕ್ಷ್ಮಿಪುರಾಣ' ದಲ್ಲಿ ನಟಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


