ಸಿನಿಮಾ ಸುದ್ದಿ

ಜಯಣ್ಣ ಕಂಬೈನ್ಸ್ ನಿರ್ಮಾಣದ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶಕ

ಬೆಲ್ ಬಾಟಮ್ ಯಶಸ್ಸಿನ ನಂತರ ನಟ ರಿಷಬ್ ಶೆಟ್ಟಿ ಕೈತುಂಬಾ ಸಿನಿಮಾಗಳಿವೆ, ಸದ್ಯ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ನಿರ್ದೇಶನದ ಕಡೆ ಗಮನ ಹರಿಸಿದ್ದಾರೆ. ತಮ್ಮ ...

ಜಯಣ್ಣ ಕಂಬೈನ್ಸ್ ನಿರ್ಮಾಣದ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶಕ
ರಿಷಬ್ ಶೆಟ್ಟಿ
Published On :
ಬೆಲ್ ಬಾಟಮ್ ಯಶಸ್ಸಿನ ನಂತರ ನಟ ರಿಷಬ್ ಶೆಟ್ಟಿ ಕೈತುಂಬಾ ಸಿನಿಮಾಗಳಿವೆ, ಸದ್ಯ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ನಿರ್ದೇಶನದ ಕಡೆ ಗಮನ ಹರಿಸಿದ್ದಾರೆ. ತಮ್ಮ ನಿರ್ದೇಶನದ ಸಿನಿಮಾವನ್ನು ಈ ವರ್ಷ ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ.
ಜಯಣ್ಣ-ಬೋಗೇಂದ್ರ ಮಾಲೀಕತ್ವದ ಜಯಣ್ಣ ಕಂಬೈನ್ಸ್ ನ ಮುಂದಿನ ಸಿನಿಮಾಗೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್  ಹೇಳಲಿದ್ದಾರೆ. ಈ ವರ್ಷದಲ್ಲೇ ಶೂಟಿಂಗ್ ಆರಂಭವಾಗಲಿದೆ.
 ಈ ಮೊದಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿರಿಕ್ ಪಾರ್ಟಿ ಸಿನಿಮಾಗಳಿಗೆ ಜಯಣ್ಣ ಹಂಚಿಕೆದಾರರಾಗಿದ್ದರು. ಇದೇ ಮೊದಲ ಬಾರಿುಗೆ ಇಬ್ಬರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ, ಸಿನಿಮಾ ಗಂಭೀರ ಕಥಾವಸ್ತುವನ್ನೊಳಗೊಂಡಿದ್ದು ಸದ್ಯ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿದೆ.
ನಿರ್ದೇಶಕರ ಮನಸ್ಸಿನಲ್ಲಿ ಕೆಲವು ನಾಯಕರುಗಳಿದ್ದು, ಅವರನ್ನು ಸದ್ಯದಲ್ಲೇ ಭೇಟಿ ಮಾಡಲಿದ್ದಾರೆ, ನಂತರ ಹೀರೋ ಯಾರು ಎಂಬುದನ್ನು ಫೈನಲ್ ಮಾಡಲಿದ್ದಾರೆ, ನಂತರ ಅವರ ಜೊತೆ ಕುಳಿತು ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.