ಗಾಳಿಪಟ-2 ಚಿತ್ರದಿಂದ ಶರಣ್-ರಿಷಿಗೆ ಕೊಕ್, ಮತ್ತೆ ಮಿಂಚಲಿದ್ದಾರೆ ಗಣೇಶ್, ದಿಗಂತ್!
2008ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಗಾಳಿಪಟ ಚಿತ್ರದ ಸಿಕ್ವೇಲ್ ನಿರ್ದೇಶನಕ್ಕೆ ಯೋಗರಾಜ್ ಭಟ್ ರೆಡಿಯಾಗಿದ್ದು ಈ ಮಧ್ಯೆ ಆಯ್ಕೆಯಾಗಿದ್ದ ಶರಣ್ ಮತ್ತು ರಿಷಿಗೆ ಕೊಕ್ ಕೊಡಲಾಗಿದ್ದು...

Published On :
2008ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಗಾಳಿಪಟ ಚಿತ್ರದ ಸಿಕ್ವೇಲ್ ನಿರ್ದೇಶನಕ್ಕೆ ಯೋಗರಾಜ್ ಭಟ್ ರೆಡಿಯಾಗಿದ್ದು ಈ ಮಧ್ಯೆ ಆಯ್ಕೆಯಾಗಿದ್ದ ಶರಣ್ ಮತ್ತು ರಿಷಿಗೆ ಕೊಕ್ ಕೊಡಲಾಗಿದ್ದು ಈ ಹಿಂದಿನ ಚಿತ್ರದಲ್ಲಿ ಅಭಿನಯಿಸಿದ್ದ ಗಣೇಶ್ ಮತ್ತು ದಿಗಂತ್ ರನ್ನೇ ಮತ್ತೆ ಕರೆದುಕೊಂಡು ಬರಲಾಗಿದೆ.
ಗಾಳಿಪಟ 2 ಚಿತ್ರವನ್ನು ಮಹೇಶ್ ದನಣ್ಣನವರ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೇನು ಚಿತ್ರೀಕರಣ ಆರಂಭವಾಗಬೇಕಿತ್ತು. ಅಷ್ಟರಲ್ಲಿ ಚಿತ್ರತಂಡದಿಂದ ಸುದ್ದಿಯೊಂದು ಹೊರಬಿದ್ದಿದೆ. ಗಣೇಶ್ ಮತ್ತು ದಿಗಂತ್ ರನ್ನು ಮತ್ತೆ ಕರೆತರಲಾಗಿದೆ. ಇನ್ನು ರಾಜೇಶ್ ಕೃಷ್ಣನ್ ಅಭಿನಯಿಸಿದ್ದ ಪಾತ್ರದಲ್ಲಿ ಈಗ ಪವನ್ ಕುಮಾರ್ ಅಭಿನಯಿಸಲಿದ್ದಾರೆ.
ಕೆಲ ದಿನಗಳಿಂದ ನಟರ ಆಯ್ಕೆ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು ಇದೀಗ ಬದಲಾವಣೆ ಆಗಿದೆ. ಇನ್ನಷ್ಟೇ ಚಿತ್ರತಂಡ ಅಧಿಕೃತ ಘೋಷಣೆ ಮಾಡಬೇಕಿದೆ.
ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಿರ್ಮಾಪಕ ಮಹೇಶ್ ಅವರು ಕಳೆದ ಡಿಸೆಂಬರ್ ನಲ್ಲೇ ಗಾಳಿಪಟ 2 ನಿರ್ಮಾಣ ಮಾಡುವುದಾಗಿ ಘೋಷಿಸಿದ್ದೇವು. ಇನ್ನು ಶರಣ್ ಮತ್ತು ರಿಷಿ ಆಯ್ಕೆ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದಾಗಿ ಚಿತ್ರತಂಡ ಆಯ್ಕೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


