ಸಿನಿಮಾ ಸುದ್ದಿ

ಉಪೇಂದ್ರ ಮುಂದಿನ ಚಿತ್ರಕ್ಕೆ ನಿಶ್ವಿಕಾ ನಾಯಕಿ?

ರಿಯಲ್ ಸ್ಟಾರ್ ಉಪ್ಪಿ ಆರ್. ಚಂದ್ರು ನಿರ್ದೇಶನದ "ಐ ಲವ್ ಯು" ಯಶಸ್ಸಿನಿಂದ ಸಂತಸಗೊಂಡಿದ್ದಾರೆ. ಇದೀಗ ಹೊಸ ನಿರ್ದೇಶಕ ಮೌರ್ಯ ಅವರ "ಬುದ್ದಿವಂತ-2" ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಉಪೇಂದ್ರ ಮುಂದಿನ ಚಿತ್ರಕ್ಕೆ ನಿಶ್ವಿಕಾ ನಾಯಕಿ?
ನಿಶ್ವಿಕಾ ನಾಯ್ಡು
Published On :
ರಿಯಲ್ ಸ್ಟಾರ್ ಉಪ್ಪಿ ಆರ್. ಚಂದ್ರು ನಿರ್ದೇಶನದ "ಐ ಲವ್ ಯು" ಯಶಸ್ಸಿನಿಂದ ಸಂತಸಗೊಂಡಿದ್ದಾರೆ. ಇದೀಗ ಹೊಸ ನಿರ್ದೇಶಕ ಮೌರ್ಯ ಅವರ "ಬುದ್ದಿವಂತ-2" ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಟಿಆರ್. ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ "ಬುದ್ದಿವಂತ 2" ನಂತರ ಉಪೇಂದ್ರ ತಾವು ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಶಶಾಂಕ್ ಇದಾಗಲೇ ತಮ್ಮ ಚಿತ್ರದ ತಯಾರಿಯಲ್ಲಿದ್ದಾರೆ. ಇನ್ನು ಹೋಂ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಾಣಕ್ಕಿಳಿದಿರುವ ನಿರ್ದೇಶಕ ಚಿತ್ರದ ನಟನಾ ವರ್ಗದ ಆಯ್ಕೆಯಲ್ಲಿ ತೊಡಗಿದ್ದಾರೆ. ಮತ್ತು ಈ ಚಿತ್ರಕ್ಕೆ ನಾಯಕಿಯನ್ನಾಗಿ ನಿಶ್ವಿಕಾ ನಾಯ್ಡು ಅವರನ್ನು ಆಯ್ಕೆ ಮಾಡಲಾಗಿದೆ.
ಉಪ್ಪಿಗಾಗಿ ಅಸಾಂಪ್ರದಾಯಿಕ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ಶಶಾಂಕ್  ರಿಯಲ್ ಸ್ಟಾರ್ ಗೆ ಯಾರು ಜೋಡಿಯಾಗಲಿದ್ದಾರೆ ಎಂಬುದನ್ನಷ್ಟೇ ಹೇಳಿದ್ದಾರೆ. ಇದಕ್ಕಾಗಿ ಅವರು "ಪಡ್ಡೆ ಹುಲಿ"ನಾಯಕಿಯನ್ನು ಅವರು ಸಂಪರ್ಕಿಸಿದ್ದಾರೆ.ನಿಶ್ವಿಕಾ ಇದಾಗಲೇ ಕನ್ನಡದ "ವಾಸು ನಾನ್ ಪಕ್ಕಾ ಕಮರ್ಷಿಯಲ್" ಹಾಗೂ "ಅಮ್ಮ ಐ ಲವ್ ಯು" ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.
ಸದ್ಯ ನಿಶ್ವಿಕಾ ಪ್ರಜ್ವಲ್ ದೇವರಾಜ್  ಅಭಿನಯದ "ಜಂಟಲ್ ಮ್ಯಾನ್" ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ, ಉಪೇಂದ್ರ ಅವರೊಂದಿಗೆ, ಶಶಾಂಕ್ ನಿರ್ದೇಶಕರಾಗಿ, ನಿಶ್ವಿಕ ಅವರ ಮೊದಲ ದೊಡ್ಡ ಸ್ಟಾರ್ ನತನ ಜತೆಗಿನ ಚಿತ್ರ ತೆರೆಗೆ ಬರಲಿದೆ. ಆಗಸ್ಟ್ ನಲ್ಲಿ ಚಿತ್ರದ ಮಹೂರ್ತ ನಡೆಯುವ ನಿರೀಕ್ಷೆ ಇದೆ.ಹಾಗೆಯೇ ಸೆಪ್ಟೆಂಬರ್ ನಲ್ಲಿ ಶೂಟಿಂಗ್ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.