ಸಿನಿಮಾ ಸುದ್ದಿ

ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾನಕ `ಚಿತ್ರಕಥಾ' ಈ ವಾರ ತೆರೆಗೆ

ಜಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಜ್ವಲ್ ಎಂ ರಾಜಾ ನಿರ್ಮಿಸಿರುವ `ಚಿತ್ರಕಥಾ` ಚಿತ್ರ ಇದೇ ಶುಕ್ರವಾರ ಜುಲೈ 12ರಂದು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ನೈಜ ಘಟನೆಗಳನ್ನ ಆಧರಿಸಿ....

ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾನಕ  `ಚಿತ್ರಕಥಾ' ಈ ವಾರ ತೆರೆಗೆ
`ಚಿತ್ರಕಥಾ'
Published On :
ಜಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಜ್ವಲ್ ಎಂ ರಾಜಾ ನಿರ್ಮಿಸಿರುವ `ಚಿತ್ರಕಥಾ` ಚಿತ್ರ ಇದೇ ಶುಕ್ರವಾರ ಜುಲೈ 12ರಂದು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ನೈಜ ಘಟನೆಗಳನ್ನ ಆಧರಿಸಿ ಮಾಡಿರುವ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾಹಂದರ ಹೊಂದಿದೆ ಕಲಾವಿದನ ಕುಂಚದಲ್ಲಿ ಹೊರಹೊಮ್ಮುವ ಪೇಂಟಿಂಗ್ ಆ ಕಲಾವಿದ ಹಾಗೂ ನಾಯಕನ ಮೇಲೆ ಬೀರುವ ಪರಿಣಾಮವೇನು ಎಂಬುದು ಚಿತ್ರದ ತಿರುಳು ಎಂದು ತಂಡ ತಿಳಿಸಿದೆ
ನಾಯಕ ಸುಜಿತ್ ರಾಣಾ ಪಾತ್ರ ನಿರ್ವಹಿಸುತ್ತಿದ್ದು, ಹರ್ಷ ಅಘೋರಿಯಾಗಿ ಕಾಣಿಸಿಕೊಂಡಿದ್ದಾರೆ ಸುಜಿತ್ ಗೆಳತಿಯಾಗಿ ಸೂಕ್ತ, ಮನೋವೈದ್ಯೆಯಾಗಿ ಸುಧಾರಾಣಿ ಅಭಿನಯಿಸಿದ್ದಾರೆ
ಪ್ರಜ್ವಲ್ ಎಮ್ ರಾಜ ಚಿತ್ರಕಥಾ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸುಜಿತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ.ಜಯಶ್ರೀ, ತಬಲನಾಣಿ, ಅನುಶಾ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದು, ಯಶಸ್ವಿ ಬಾಲಾದಿತ್ಯ ನಿರ್ದೇಶನದ ಈ ಚಿತ್ರಕ್ಕೆ ಚೇತನ್‍ಕುಮಾರ್ ಸಂಗೀತ ನೀಡಿದ್ದಾರೆ ತನ್ವಿಕ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ರಘು ಪ್ರವೀಣ್ ಕೃಷ್ಣಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಸೈಕಿಯಾಟ್ರಿಸ್ಟ್ ಆದ ಸುಧಾರಾಣಿ
ಇನ್ನು "ಚಿತ್ರಕಥಾ ಚಿತ್ರಕ್ಕಾಗಿ ಕನ್ನಡದ ಹಿರಿಯ ನಟಿ ಸುಧಾರಾಣಿ ಮತ್ತೆ ಬಣ್ನ ಹಚ್ಚಿದ್ದಾರೆ. ಈ ಬಾರಿ ಸೈಕಿಯಾಟ್ರಿಸ್ಟ್ ಆಗಿ ಸುಧಾರಾಣಿ ತೆರೆ ಮೇಲೆ ಕಾಣಿಸಿಕೊಳ್ಲುತ್ತಿದ್ದಾರೆ.ಎಲ್ಲಾ ಹೊಸಬರೇ ಇರುವ ಈ ಚಿತ್ರದಲ್ಲಿ ನಟಿಸುತ್ತಿರುವುದು ಸುಧಾರಾಣಿಯವರಿಗೆ ಖುಷಿ ತಂದಿದೆಯಂತೆ. ಅಷ್ಟೇ ಅಲ್ಲದೆ ತಾವು ತಮ್ಮ ಪಾತ್ರದ ಬಗೆಗೆ ಮಾತರ ಗಮನ ಹರಿಸದೆ ಇಡೀ ಚಿತ್ರವೇ ತಮ್ಮದೆಂದು ಭಾವಿಸಿ ನಟಿಸಿದ್ದಾಗಿ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.