ಬಹುಶಃ ಇದು ಅತ್ಯಂತ ಕಷ್ಟಕರ ಡ್ಯಾನ್ಸ್ ಸ್ಟೆಪ್ ಇರಬೇಕು ಎಂದು ಕಿಚ್ಚ ಸುದೀಪ್ ಅಂದಿದ್ದೇಕೆ?
ನಟ ಕಿಚ್ಚ ಸುದೀಪ್ ಹಿಂದಿಯಲ್ಲಿ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಚಿತ್ರದಲ್ಲಿ ವಿಲನ್ ಪಾತ್ರ ...

Published On :
ಬೆಂಗಳೂರು: ನಟ ಕಿಚ್ಚ ಸುದೀಪ್ ಹಿಂದಿಯಲ್ಲಿ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರಭುದೇವ್ ಈ ಸಿನಿಮಾದ ನಿರ್ದೇಶಕರು. ಚಿತ್ರೀಕರಣ ಸಾಗುತ್ತಿದ್ದು ಈ ಮಧ್ಯೆ ಚಿತ್ರತಂಡ ಬಿಡುವಿನಲ್ಲಿ ನೃತ್ಯ ಮಾಡಿ ಸಂಭ್ರಮಿಸಿತು. ಅದು ಪ್ರಭುದೇವ ಅವರ ಅತ್ಯಂತ ಪ್ರಸಿದ್ಧ ಊರ್ವಶಿ..ಊರ್ವಶಿ ಹಾಡಿಗೆ.
ಆಗ ತಾವು ಮಾಡಿದ ನೃತ್ಯವನ್ನು ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ಮಾಸ್ಟರ್ ಕೈಯಿಂದ ಡ್ಯಾನ್ಸ್ ಕ್ಲಾಸ್ ಎಂದು ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಸಹ ಅದನ್ನು ಶೇರ್ ಮಾಡಿದ್ದಾರೆ.
ಬಹುಶಃ ಇದು ಅತ್ಯಂತ ಕಷ್ಟಕರ ಡ್ಯಾನ್ಸ್ ಸ್ಟೆಪ್ ಆಗಿರಬೇಕು ಅದನ್ನು ಚಿತ್ರೀಕರಿಸಲಾಗಿದೆ ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.
ಪ್ರಭುದೇವ್ ವಿಭಿನ್ನ ನೃತ್ಯ ಶೈಲಿಗೆ ಫೇಮಸ್. ಹೀಗೆ ಪ್ರಭುದೇವ್ ಹೇಳಿಕೊಡುವ ಡ್ಯಾನ್ಸ್ ನ್ನು ಸನ್ಮಾನ್ ಖಾನ್, ಕಿಚ್ಚ ಸುದೀಪ್ ಮತ್ತು ವರ್ದಖಾನ್ ನಾಡಿಯಾಡ್ವಾಲಾ ತಮಾಷೆಯಿಂದ ನಗುತ್ತಾ ಮಾಡುತ್ತಿರುವ ವಿಡಿಯೊ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.
ನಟ ಸುದೀಪ್ ಡ್ಯಾನ್ಸ್ ಮಾಡುವುದು ತೀರ ಕಡಿಮೆ. ಅವರೇ ಅನೇಕ ಬಾರಿ ತಾವು ಡ್ಯಾನ್ಸ್ ನಲ್ಲಿ ವೀಕ್ ಅಂತ ಹೇಳುತ್ತಾರೆ. ಡ್ಯಾನ್ಸ್ ಬಗ್ಗೆ ಹೆಚ್ಚು ಆಸಕ್ತಿ ತೋರದ ಸುದೀಪ್ ಬಾಲಿವುಡ್ ನ ಸೂಪರ್ ಸ್ಟಾರ್ ಗಳ ಜೊತೆಗೆ ಖುಷಿಯಿಂದಲೇ ಹೆಜ್ಜೆ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


