ಸಿನಿಮಾ ಸುದ್ದಿ

ಬಿಗ್ ಬಾಸ್ ಗೆಲ್ಲಬೇಕು ಅಂದರೆ ಏನ್ ಬೇಕು, ಫೇಸ್‍ಬುಕ್‍ ಲೈವ್‍ನಲ್ಲಿ ರ್ಯಾಪಿಡ್ ರಶ್ಮಿ ಹೇಳಿದ್ದೇನು?

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು ಮಾಡರ್ನ್ ರೈತ ಶಶಿಕುಮಾರ್ ವಿನ್ನರ್, ಗಾಯಕ ನವೀನ್ ಸಜ್ಜು ರನ್ನರಪ್ ಆಗಿ ಹೊರಬಂದಿದ್ದಾರೆ.

ಬಿಗ್ ಬಾಸ್ ಗೆಲ್ಲಬೇಕು ಅಂದರೆ ಏನ್ ಬೇಕು, ಫೇಸ್‍ಬುಕ್‍ ಲೈವ್‍ನಲ್ಲಿ ರ್ಯಾಪಿಡ್ ರಶ್ಮಿ ಹೇಳಿದ್ದೇನು?
ರಶ್ಮಿ
Published On :
ಬೆಂಗಳೂರು: ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು ಮಾಡರ್ನ್ ರೈತ ಶಶಿಕುಮಾರ್ ವಿನ್ನರ್, ಗಾಯಕ ನವೀನ್ ಸಜ್ಜು ರನ್ನರಪ್ ಆಗಿ ಹೊರಬಂದಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದ ರ್ಯಾಪಿಡ್ ರಶ್ಮಿ ಟಾಪ್ 5 ಕಂಟೆಸ್ಟಂಟಾಗಿ ಎಲಿಮಿನೇಟ್ ಆಗಿ ಹೊರಬಂದಿದ್ದು ಇದೇ ಮೊದಲ ಬಾರಿಗೆ ನಿನ್ನೆ ಫೇಸ್‍ಬುಕ್‍ ಲೈವ್‍ನಲ್ಲಿ ಬಂದಿದ್ದರು.
ಈ ವೇಳೆ ಸಾಕಷ್ಟು ಜನರು ಅವರಿಗೆ ಕಮೆಂಟ್ ಮಾಡಿ ಯೋಗಕ್ಷೇಮ ವಿಚಾರಿಸಿದರು. ಇನ್ನೂ ಕೆಲವರು ಬಿಗ್ ಬಾಸ್ ವಿಜಯಿಯಾಗಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದ್ದರು.
ತಮ್ಮನ್ನು ಬೆಂಬಲಿಸಿದ್ದವರಿಗೆ ನಿನ್ನೆ ಉತ್ತರಿಸಿದ ರಶ್ಮಿ ಬಿಗ್ ಬಾಸ್ ಗೆಲ್ಲಬೇಕು ಅಂದರೆ ಹೊರಗಡೆ ತುಂಬಾ ಪ್ರಚಾರ ಮಾಡಬೇಕು. ನಾನು ಅದನ್ನು ಮಾಡಿಲ್ಲ. ಪ್ರಮಾಣಿಕವಾಗಿ ಆಟವಾಡಿದ್ದೇನೆ. ಇದನ್ನು ನೋಡಿ ನೀವು ವೋಟ್ ಮಾಡಿದ್ದರ ಫಲವಾಗಿ ಅಷ್ಟು ದೂರ ಬಿಗ್ ಬಾಸ್ ಮನೆಯಲ್ಲಿದ್ದೆ ಎಂದಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದರು. 
ಇದೇ ವೇಳೆ ಆ್ಯಂಡಿ ಕುರಿತು ಮಾತನಾಡಿದ ಅವರು ಆ್ಯಂಡಿದು ಖಂಡಿತವಾಗಿಯೂ ಮಗುವಿನಂತ ಮನಸ್ಸಲ್ಲ. ಅದು ಕ್ಯಾಮರಾ ಮುಂದೆ ಮಾಡಿರುವ ಕಪಿಚೇಷ್ಟೆಯಷ್ಟೇ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.