ಸಿನಿಮಾ ಸುದ್ದಿ

ನಿಖಿಲ್ ನಲ್ಲಿ ಆಗಿರುವ ಬದಲಾವಣೆ ವರ್ಣಿಸಲು ಸಾಧ್ಯವಿಲ್ಲ: ಎ.ಹರ್ಷ

ಅಂತಿಮ ಹಂತದ ಕೆಲಸಗಳಿಗಾಗಿ ಚಿತ್ರತಂಡ ಮುಂಬಯಿಯಲ್ಲಿ ಬೀಡುಬಿಟ್ಟಿದೆ, ಸೀತಾರಾಮ ಕಲ್ಯಾಣ ನಿರ್ದೇಶಕ ಹರ್ಷ ಅವರ 8ನೇ ಚಿತ್ರ, ಸಿನಿಮಾ ನಿರ್ದೇಶನ ನನಗೆ ಹೊಸತಲ್ಲ, ...

ನಿಖಿಲ್ ನಲ್ಲಿ ಆಗಿರುವ ಬದಲಾವಣೆ ವರ್ಣಿಸಲು ಸಾಧ್ಯವಿಲ್ಲ: ಎ.ಹರ್ಷ
ನಿಖಿಲ್ ಕುಮಾರ್
Published On :
ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಜನವರಿ 25ರಂದು ರಿಲೀಸ್ ಆಗಲಿದೆ, 
ಅಂತಿಮ ಹಂತದ ಕೆಲಸಗಳಿಗಾಗಿ  ಚಿತ್ರತಂಡ ಮುಂಬಯಿಯಲ್ಲಿ ಬೀಡುಬಿಟ್ಟಿದೆ, ಸೀತಾರಾಮ ಕಲ್ಯಾಣ ನಿರ್ದೇಶಕ ಹರ್ಷ ಅವರ 8ನೇ ಚಿತ್ರ, ಸಿನಿಮಾ ನಿರ್ದೇಶನ ನನಗೆ ಹೊಸತಲ್ಲ, ಪ್ರತಿಯೊಬ್ಬ ನಿರ್ಮಾಪಕರ ಜೊತೆ ಮಾಡುವ ಕೆಲಸ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯೊಬ್ಬರ ಪುತ್ರನ  ಸಿನಿಮಾ ಮಾಡುತ್ತಿದ್ದೇನೆ ಎಂಬ ಅನುಭವವಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಹರ್ಷ, ನಿಖಿಲ್ ಒಬ್ಬ ವೃತ್ತಿಪರ ನಟ, ಸೆಟ್ ನಲ್ಲಿ ಅವರು ರಾಜಕೀಯವನ್ನು ಎಂದೂ ತಂದವರಲ್ಲ,  ಒಬ್ಬ ಕಲಾವಿದನಾಗಿ ಬರುತ್ತಿದ್ದರು.,ಈ ಸಿನಿಮಾದಲ್ಲಿ ಅವರ ರೂಪಾಂತರ ಹೋಲಿಕೆಗೆ ನಿಲುಕದ್ದು, ನೀವು ಒಮ್ಮೆ ಸೀತಾರಾಮಯ ಕಲ್ಯಾಣ ಸಿನಿಮಾ ನೋಡಿ, ಅದರಲ್ಲಿ ನಿಖಿಲ್ ಡ್ಯಾನ್ಸ್,  ಆ್ಯಕ್ಷನ್, ಪ್ರಬುದ್ದತೆ ತಿಳಿಯುತ್ತದೆ. ಅವರಲ್ಲಾಗಿರುವ ಬದಲಾವಣೆ ನಿಮ್ಮ ಗಮನಕ್ಕೆ ಬರುತ್ತದೆ.
ಸಿನಿಮಾ ನಿರ್ಮಾಪಕರು ಆಗಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರನ್ನು ಹರ್ಷ ಭೇಟಿ ಮಾಡಿ ಚರ್ಚಿಸಿದ್ದರು, ಸಿನಿಮಾ ವಿಷಯದಲ್ಲಿ ಅಪಾರವಾಗಿ ತಿಳಿದುಕೊಂಡಿರುವ ಸಿಎಂ ಕೆಲ ವಿಷಯಗಳಲ್ಲಿ ತುಂಬಾ ಪರ್ಟಿಕುಲರ್,ಅವರ ಬ್ಯುಸಿ ಷೆಡ್ಯೂಲ್ ನಲ್ಲಿ ಕೆಲ ಬಾರಿ ಸಿನಿಮಾ ಶೆಟ್ ಗೆ ಭೇಟಿ ನೀಡುತ್ತಿದ್ದರು. ಇನ್ನೂ ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ,ತುಂಬಾ ನೇರ ಮಾತಿನ ಮಹಿಳೆ ಅವರು ಮಾತು ಕಡಿಮ, ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ ಎಂದು ಹರ್ಷ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.