ಸಿನಿಮಾ ಸುದ್ದಿ

ಪುನೀತ್ ಶಿಸ್ತಿನ ವಿದ್ಯಾರ್ಥಿ: ಬಾಹುಬಲಿ ಸ್ಟಂಟ್ ಮಾಸ್ಟರ್ ಪೀಟರ್

ಬಾಹುಬಲಿಯಂತ ಬ್ಲಾಕ್ ಬಸ್ಟರ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೈನ್ ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ...

ಪುನೀತ್ ಶಿಸ್ತಿನ ವಿದ್ಯಾರ್ಥಿ: ಬಾಹುಬಲಿ ಸ್ಟಂಟ್ ಮಾಸ್ಟರ್ ಪೀಟರ್
ಪುನೀತ್ ರಾಜಕುಮಾರ್-ಪೀಟರ್ ಹೈನ್
Published On :
ಬಾಹುಬಲಿಯಂತ ಬ್ಲಾಕ್ ಬಸ್ಟರ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೈನ್ ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೂ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. 
ನಟಸಾರ್ವಭೌಮ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಕೈಯಲ್ಲಿ ಭರ್ಜರಿ ಸ್ಟಂಟ್ಸ್ ಮಾಡಿಸಿರುವ ಪೀಟರ್ ಹೈನ್ ಅವರು ಪುನೀತ್ ಓರ್ವ ಶಿಸ್ತಿನ ವಿದ್ಯಾರ್ಥಿ ಹೇಳಿಕೊಟ್ಟಿದ್ದನ್ನು ಚಾಚು ತಪ್ಪದೆ ಪಾಲಿಸುತ್ತಾರೆ ಎಂದು ಹೇಳಿದ್ದಾರೆ. 
ಈ ಚಿತ್ರಕ್ಕಾಗಿ ವಿಭಿನ್ನವಾಗಿ ಸಾಹಸ ಸಂಯೋಜನೆ ಮಾಡುವ ಅವಕಾಶ ಸಿಕ್ಕಿತ್ತು. ಸಖತ್ ಸ್ಟೈಲಿಶ್ ಆಗಿ ಪುನೀತ್ ಫೈಟ್ ಮಾಡಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಸಹಜವಾಗಿ ಕಾಣುವಂತೆ ಮಾಡಿದ್ದೇವೆ. ಇನ್ನು ನಾನು ಹೇಳಿಕೊಟ್ಟ ಪ್ರತಿಯೊಂದು ಫೈಟ್ ಅನ್ನು ಪುನೀತ್ ಅತ್ಯುತ್ತಮವಾಗಿ ಮಾಡಿದ್ದಾರೆ ಎಂದರು. 
ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದು ಪುನೀತ್ ಗೆ ಜೋಡಿಯಾಗಿ ರಚಿತಾ ರಾಮ್ ಹಾಗೂ ಅನುಪಮ ನಟಿಸಿದ್ದಾರೆ. ಫೆಬ್ರವರಿ 7ಕ್ಕೆ ದೇಶಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.