ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿಯಲು ಕಾರಣವೇನು?
18ನೇ ಶತಮಾನದ ಐತಿಹಾಸಿಕ ಕಥೆ ಆಧರಿಸಿ ಮದಕರಿ ನಾಯಕ ಸಿನಿಮಾ ತಯಾರಾಗುತ್ತಿದೆ, ದರ್ಶನ್ ನಟನೆಯ ಈ ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ...

Published On :
18ನೇ ಶತಮಾನದ ಐತಿಹಾಸಿಕ ಕಥೆ ಆಧರಿಸಿ ಮದಕರಿ ನಾಯಕ ಸಿನಿಮಾ ತಯಾರಾಗುತ್ತಿದೆ, ದರ್ಶನ್ ನಟನೆಯ ಈ ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಗಂಡುಗಲಿ ಮದಕರಿ ನಾಯಕ ಸಿನಿಮಾಗಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ,
ಇನ್ನೂ ಇದೇ ರೀತಿಯ ಕಥೆ ಹೊಂದಿರುವ ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿದಿದ್ದಾರೆ, ನಿರ್ದೇಶಕರು ಹಾಗೂ ನಿರ್ಮಾಪಕರ ಜೊತೆ ಚರ್ಚಿಸಿ ಸಿನಿಮಾದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ,
ಸುದೀಪ್ ಸದ್ಯ ಹೈದರಾಬಾದ್ ನಲ್ಲಿ ಸೈ ರಾ ನರಸಿಂಹ ರೆಡ್ಡಿ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ನನ್ನ ಪ್ರಕಾರ ಮದಕರಿ ನಾಯಕ ಮತ್ತು ದುರ್ಗದ ಹುಲಿ ಸಿನಿಮಾ ಎರಡು ಕಥೆಗಳು ಒಂದೆಯಾಗಿವೆ, ಒಂದೇ ತಟ್ಟೆಯಲ್ಲಿ ಒಂದೇ ರೀತಿಯ ಊಟವನ್ನು ಬಡಿಸಿದಂತಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ,
ರಾಕ್ ಲೈನ್ ವೆಂಕಟೇಶ್ ಅವರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ,ರಾಜೇಂದ್ರ ಸಿಂಗ್ ಬಾಬು ಹಲವು ಸಿನಿಮಾ ನಿರ್ದೇಶಿಸಿದ್ದಾರೆ. ದರ್ಶನ್ ನಟನೆಯ ಗಂಡುಗಲಿ ಮದಕರಿ ನಾಯಕ ಸಿನಿಮಾಗಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sudeepಸುದೀಪ್Rockline Venkateshರಾಕ್ ಲೈನ್ ವೆಂಕಟೇಶ್Gandugali Madakari Nayakaಗಂಡುಗಲಿ ಮದಕರಿ ನಾಯಕDurgada Huliದುರ್ಗದ ಹುಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


