'ಟಗರು' ನಾಯಕಿ ಮಾನ್ವಿತಾ ದ್ವಿಭಾಷಾ ಚಿತ್ರಕ್ಕೆ ಟೈಟಲ್ ಫಿಕ್ಸ್!
ಮಾನ್ವಿಯ್ತಾ ಹರೀಶ್ ಅಭಿನಯದ ಕನ್ನಡ, ಮರಾಠಿ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ದ್ವಿಭಾಷಾ ಚಿತ್ರಕ್ಕೆ "ರಾಜಸ್ಥಾನ ಡೈರಿಸ್" ಎಂದು ಹೆಸರಿಡಲಾಗಿದೆ.

Published On :
ಬೆಂಗಳೂರು: ಮಾನ್ವಿಯ್ತಾ ಹರೀಶ್ ಅಭಿನಯದ ಕನ್ನಡ, ಮರಾಠಿ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ದ್ವಿಭಾಷಾ ಚಿತ್ರಕ್ಕೆ "ರಾಜಸ್ಥಾನ ಡೈರಿಸ್" ಎಂದು ಹೆಸರಿಡಲಾಗಿದೆ. ನಂದಿತಾ ಯಾದವ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮಾರ್ಚ್ 7ರಿಂದ ಪ್ರಾರಂಭವಾಗಲಿದೆ.
ನವ ನಟ ಸುಮುಖ್ ಮಾನ್ವಿತಾ ಅವರ ಜೋಡಿಯಾಗಿ ಕಾಣಿಸಿಕೊಳ್ಳುವ ಈ ಚಿತ್ರದ ಚಿತ್ರೀಕರಣ ಮುಂಬೈ ಹಾಗೂ ರಾಜಸ್ಥಾನದಲ್ಲಿ ನಡೆಯಲಿದೆ. ಇದೊಂದು ಹದಿಹರೆಯದ ಪ್ರಣಯ ಕಥಾನಕವಾಗಿದೆ.
"ಟಗರು" ನಾಯಕಿ ಮಾನ್ವಿತಾ ಇದಾಗಲೇ ಅನಿಲ್ ಕುಮಾರ್ ನಿರ್ದೇಶನದ "ದಾರಿ ತಪ್ಪಿದ ಮಗ" ಹಾಗು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ವಸಿಷ್ಟ ಸಿಂಹ ನಾಯಕನಾಗಿರುವ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಅರುಣ್ ಸಾಗರ್, ರಾಜೇಶ್ ನಟರಂಗ ಹಾಗೂ ಮಿಥುನ್ ಚಕ್ರವರ್ತಿ ಅಭಿನಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


