ಈ ಹಂತದಲ್ಲಿ, ಯಾರೂ ನನ್ನ ಸಿನಿಮಾದ ಮೌಲ್ಯ ಅಳೆಯುವುದು ಬೇಕಿಲ್ಲ: ಪ್ರಿಯಾಂಕಾ ಉಪೇಂದ್ರ
ನಾನು ಇಲ್ಲಿಯೇ ಇದ್ದೇನೆ, ನಾನು ವಾಪಸ್ ಬರುತ್ತಿದ್ದೇನೆ, ನನ್ನ ಸಿನಿಮಾ ಕೇಲವ ಡಿಕ್ಷನರಿಯಲ್ಲಿರುವುದು ನನಗೆ ಬೇಕಿಲ್ಲ, ಜೊತೆಗೆ ಈ ಹಂತದಲ್ಲಿ ನನ್ನ ಕೆಲಸದ ಬಗ್ಗೆ ಮೌಲ್ಯ ಮಾಡುವ ಅಗತ್ಯವಿಲ್ಲ..

Published On :
ನಾನು ಇಲ್ಲಿಯೇ ಇದ್ದೇನೆ, ನಾನು ವಾಪಸ್ ಬರುತ್ತಿದ್ದೇನೆ, ನನ್ನ ಸಿನಿಮಾ ಕೇಲವ ಡಿಕ್ಷನರಿಯಲ್ಲಿರುವುದು ನನಗೆ ಬೇಕಿಲ್ಲ, ಜೊತೆಗೆ ಈ ಹಂತದಲ್ಲಿ ನನ್ನ ಕೆಲಸದ ಬಗ್ಗೆ ಮೌಲ್ಯ ಮಾಡುವ ಅಗತ್ಯವಿಲ್ಲ ಎಂದು ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ಸದ್ಯ ಪ್ರಿಯಾಂಕಾ ಲೋಹಿತ್ ನಿರ್ದೇಶನದ ಹೌರಾ ಬ್ರಿಡ್ಜ್ ಸಿನಿಮಾ ಶೂಟಿಂಗ್ ನಲ್ಲಿದ್ದಾರೆ. ಈ ಸಿನಿಮಾದಲ್ವಿ ಪ್ರಿಯಾಂಕಾ ಪುತ್ರಿ ಐಶ್ವರ್ಯಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ಏಪ್ರಿಲ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಜೊತೆಗೆ ಸೆನ್ಸಾರ್ ಬೋರ್ಡ್ ಗೂ ಅಪ್ಲೈ ಮಾಡಲಾಗಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್, ಲೋಹಿತ್ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ. ಸಿನಿಮಾ ಆರಂಭವಾಗಿ ಒಂದೂವರೆ ವರ್ಷವಾಗಿದೆ, ಜನವರಿಯಲ್ಲಿ ಕೊಲ್ಕೋತ್ತಾದಲ್ಲಿ ಶೂಟಿಂಗ್ ಮುಗಿಸಿದ್ದೇವೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ,.
ಬೇರೆ ಸಿನಿಮಾಗಳಿಗಾಗಿ ಆಫರ್ ಬರುತ್ತಿವೆ, ತಮಿಳು ಸಿನಿಮ ಒಂದರಲ್ಲಿ ನಟಿಸತ್ತಿದ್ದಾರೆ, ಮಮ್ಮಿ ಭಾಗ 2 ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ ಹೌರಾ ಬ್ರಿಡ್ಜ್ ನಂತರ ಇದರ ಬಗ್ಗೆ ಚಿಂತಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಕೇವಲ ಹಿರೋಯಿನ್ ಅಲ್ಲಾ, ನಾನೊಬ್ಬ ಕಲಾವಿದೆ, ತುಂಬಾ ಕೆಲಸ ಮಾಡುವುದರಿಂದ ನನಗೆ ಯಾವುದೇ ತೊಂದರೆಯಿಲ್ಲ, ಪ್ರಿಯಾಂಕಾ ಏಕೆ ಹೀಗೆ ಮಾಡಿದರು ಎಂದು ಪ್ರಶ್ನಿಸುವುದು ನನಗೆ ಇಷ್ಟವಿಲ್ಲ,
ಉಪೇಂದ್ರ ರಾಜಕೀಯದ ಬಗ್ಗೆ ಮಾತನಾಡಿದ ಪ್ರಿಯಾಂಕಾ, ಅವರ ಕೆಲಸದಲ್ಲಿ ನಾನು ಭಾಗಿಯಾಗಲು ಪ್ರಯತ್ನಿಸುತ್ತಿದ್ದೇನೆ, ಅವರಿಗೆ ನನ್ನ ನೈತಿಕ ಬೆಂಬಲದ ಅವಶ್ಯಕತೆಯಿದೆ, ಆದರೆ ಅವರಿಗೆ ನಾನು ರಾಜಕೀಯದಲ್ಲಿ ಭಾಗವಹಿಸುವುದು ಇಷ್ಚವಿಲ್ಲ, ಬಹಳ ಜನ ನನ್ನನ್ನು ಕೇಳುತ್ತಾರೆ, ನೀವು ಏಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಕೇಳುತ್ತಾರೆ, ಆದರೆ ನನಗೆ ಈ ಬಗ್ಗೆ ಇನ್ನೂ ಹೆಚ್ಚಿನ ಜ್ಞಾನ ಬೇಕು, ಅದಕ್ಕಾಗಿ ಸಮಯ ಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


