ಸಿನಿಮಾ ಸುದ್ದಿ

ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಕ್ರಿಯಾ ಸಮಾಧಿ ದರ್ಶನ ಪಡೆದ ಶಿವಣ್ಣ

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಸಿದ್ದಗಂಗಾ ಮಠಕ್ಕೆ ತೆರಳಿ ಡಾ. ಶಿವಕುಮಾರ ಶ್ರೀಗಳ ಕ್ರೀಯಾ ಸಮಾಧಿ ದರ್ಶನ ಪಡೆದರು. ಪೂಜೆ ಸಲ್ಲಿಸಿ ಕ್ರೀಯಾ ಸಮಾಧಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಕ್ರಿಯಾ ಸಮಾಧಿ ದರ್ಶನ ಪಡೆದ ಶಿವಣ್ಣ
ಶಿವರಾಜ್ ಕುಮಾರ್
Published On :

ತುಮಕೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಸಿದ್ದಗಂಗಾ ಮಠಕ್ಕೆ ತೆರಳಿ ಡಾ. ಶಿವಕುಮಾರ ಶ್ರೀಗಳ ಕ್ರೀಯಾ ಸಮಾಧಿ  ದರ್ಶನ ಪಡೆದರು. ಪೂಜೆ ಸಲ್ಲಿಸಿ ಕ್ರೀಯಾ ಸಮಾಧಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡೆದಾಡುವ ದೇವರಾಗಿದ್ದ ಶಿವಕುಮಾರ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆಯನ್ನು ಯಾರೂ ಮೀರಿಸಲಾಗದು, ಶ್ರೀ ಮಠದ ಮಕ್ಕಳು, ಕಲ್ಲು ಬಂಡೆಗಳು, ಬೆಟ್ಟ ಸೇರಿದಂತೆ ಎಲ್ಲ ರೂಪದಲ್ಲಿ ಶ್ರೀಗಳನ್ನು ಕಾಣಬಹುದು ಎಂದರು.

ಮನುಕುಲದ ಉದ್ಧಾರಕ್ಕೆ ಶ್ರೀಗಳು ಸಲ್ಲಿಸಿರುವ ಕೊಡುಗೆ ಮಹತ್ವದಾಗಿದೆ. ಶ್ರೀಗಳ ಹೆಸರಲ್ಲೇ  ಒಂದು ದೊಡ್ಡ ಶಕ್ತಿ ಇದೆ.  ಇಷ್ಟು ವರ್ಷ ಹೇಗೆ ಮಠ ನಡೆಯತೋ ಅದೇ ರೀತಿ ಮುಂದೆಯೂ ಶ್ರೀಗಳ ಪವಾಡದಿಂದ ಮುನ್ನಡೆಯಲಿದೆ. ಸಿದ್ದಲಿಂಗ ಸ್ವಾಮೀಜಿ ಅವರು ಶ್ರೀಗಳಂತೆ ಮಠವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ ಎಂದರು.

ಸ್ವಾಮೀಜಿ ಶಿವೈಕ್ಯರಾದಾಗ ಅಮೆರಿಕಾದಲ್ಲಿ ಇದೆ. ಸುದ್ದಿ ಕೇಳಿ ನೋವಾಗಿತ್ತು ಎಂದು ಹೇಳಿದ ಶಿವರಾಜ್ ಕುಮಾರ್, ಟಗರು ಚಿತ್ರದ ಚಿತ್ರೀಕರಣಕ್ಕಾಗಿ ಸಿದ್ದಗಂಗಾ ಮಠಕ್ಕೆ ಬಂದು ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದನ್ನು ನೆನಪಿಸಿಕೊಂಡರು.  ನಂತರ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.