ಕಮಲ್ ಹಾಸನ್ ಭೇಟಿ ಮಾಡಿ ಪುತ್ರಿ ವಿವಾಹಕ್ಕೆ ಆಹ್ವಾನಿಸಿದ 'ತಲೈವಾ'
ಹಿಂದೊಮ್ಮೆ ಸಿನಿಮಾ ಕ್ಷೇತ್ರದಲ್ಲಿ ಸ್ಪರ್ಧಿಗಳಾಗಿದ್ದ ಇಂದು ರಾಜಕೀಯಕ್ಕೆ ಧುಮುಕಿರುವ ತಮಿಳಿನ ಸೂಪರ್ ...

ಚೆನ್ನೈ: ಹಿಂದೊಮ್ಮೆ ಸಿನಿಮಾ ಕ್ಷೇತ್ರದಲ್ಲಿ ಸ್ಪರ್ಧಿಗಳಾಗಿದ್ದ ಇಂದು ರಾಜಕೀಯಕ್ಕೆ ಧುಮುಕಿರುವ ತಮಿಳಿನ ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ನಿನ್ನೆ ಚೆನ್ನೈಯಲ್ಲಿ ಭೇಟಿಯಾಗಿದ್ದಾರೆ.
ಇಬ್ಬರೂ ಪರಸ್ಪರ ಭೇಟಿಯಾದಾಗ ಆಲಂಗಿಸಿ ಆತ್ಮೀಯತೆಯನ್ನು ತೋರಿಸಿಕೊಂಡರು. ರಜನಿಕಾಂತ್ ಅವರ ಮಗಳು ಸೌಂದರ್ಯ ಅವರ ವಿವಾಹ ಇದೇ 11ರಂದು ಚೆನ್ನೈಯಲ್ಲಿ ನಡೆಯಲಿದ್ದು ಅದಕ್ಕೆ ಆಹ್ವಾನಿಸಲು ರಜನಿಕಾಂತ್ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಡಿಸೆಂಬರ್ 17ರಂದು ರಾಜಕೀಯಕ್ಕೆ ಪ್ರವೇಶಿಸಿದ ತಲೈವಾರ್ ಇನ್ನೂ ತಮ್ಮ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿಕೊಂಡಿಲ್ಲ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ. ಕಮಲ್ ಹಾಸನ್ ಅವರು ತಮಿಳುನಾಡು ಮತ್ತು ಪುದುಚೆರಿಯಲ್ಲಿ ತಮ್ಮ ಮಕ್ಕಳ್ ನಿದಿ ಮಯಾಮ್(ಎಂಎನ್ಎಂ) ಪಕ್ಷ 40 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಆದರೆ ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಎಂಬುದನ್ನು ಕಮಲ್ ಹಾಸನ್ ಬಹಿರಂಗಪಡಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


