ಸಿನಿಮಾ ಸುದ್ದಿ

ಸೀತಾರಾಮ ಕಲ್ಯಾಣ ಸಿನಿಮಾ ಪೈರಸಿ: ಅನಿತಾ ಕುಮಾರಸ್ವಾಮಿಯಿಂದ ದೂರು ದಾಖಲು

ನಿಖಿಲ್‌ ಕುಮಾರಸ್ವಾಮಿ ಅಭಿನಯದ ಇತ್ತೀಚೆಗೆ ಬಿಡುಗಡೆಯಾಗಿರುವ 'ಸೀತಾರಾಮ ಕಲ್ಯಾಣ' ಸಿನಿಮಾವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ಕುರಿತು ...

ಸೀತಾರಾಮ ಕಲ್ಯಾಣ ಸಿನಿಮಾ ಪೈರಸಿ: ಅನಿತಾ ಕುಮಾರಸ್ವಾಮಿಯಿಂದ ದೂರು ದಾಖಲು
ಸೀತಾರಾಮ ಕಲ್ಯಾಣ
Published On :
ಬೆಂಗಳೂರು: ನಿಖಿಲ್‌ ಕುಮಾರಸ್ವಾಮಿ ಅಭಿನಯದ ಇತ್ತೀಚೆಗೆ ಬಿಡುಗಡೆಯಾಗಿರುವ 'ಸೀತಾರಾಮ ಕಲ್ಯಾಣ' ಸಿನಿಮಾವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ಕುರಿತು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ದೂರು ದಾಖಲಿಸಿದ್ದಾರೆ.
ಚೆನ್ನಾಂಬಿಕ ಫಿಲಂಸ್‌ನ ಮಾಲೀಕರಾದ ಅನಿತಾ ಕುಮಾರಸ್ವಾಮಿ ಅವರು ನೀಡಿದ ದೂರು ಆಧರಿಸಿ ಟಿ.ಎಸ್‌.ಶಶಿಧರ್‌ ಹಾಗೂ ಕನ್ನಡ ನ್ಯೂ ಮೂವೀಸ್‌ ಎಂಬ ಆನ್‌ಲೈನ್‌ ಚಾನೆಲ್‌ ವಿರುದ್ಧ ಕಾಪಿರೈಟ್‌ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಫೆ.5ರಂದು ಪ್ರಕರಣ ದಾಖಲಾಗಿದೆ. 
ಚೆನ್ನಾಂಬಿಕ ಬ್ಯಾನರ್‌ನಲ್ಲಿ ಸೀತಾರಾಮ ಕಲ್ಯಾಣ ಸಿನಿಮಾ ನಿರ್ಮಾಣ ಮಾಡಿ ಜ.25ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗಿದೆ. ಆದರೆ, ಕೆಲವು ಕಿಡಿಗೇಡಿಗಳು ಮೊಬೈಲ್‌ ಅಥವಾ ಕ್ಯಾಮೆರಾದಲ್ಲಿ ಚಿತ್ರವನ್ನು ಚಿತ್ರಮಂದಿರದಲ್ಲಿ ರೆಕಾರ್ಡ್‌ ಮಾಡಿಕೊಂಡು ಯುಟ್ಯೂಬ್‌ ಹಾಗೂ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. 
ಇದರಿಂದ ನಮ್ಮ ಸಂಸ್ಥೆಗೆ ನಷ್ಟ ಉಂಟಾಗಿದೆ. ಹೀಗಾಗಿ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಿ, ನಷ್ಟವನ್ನು ತುಂಬಿಸಿಕೊಡಬೇಕು'' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.