ಪೊಗರು ಸಿನಿಮಾದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಬಳಕೆ: ನಂದ ಕಿಶೋರ್
ಪೊಗರು ಚಿತ್ರತಂಡ ಸಿನಿಮಾ ಸೆಟ್ ನಲ್ಲಿ ಹೊಸ ತಂತ್ರಜ್ಞಾನ ಬಳಸಿದ್ದಾರೆ, ಪೊಗರು ಸಿನಿಮಾ ಶೂಟಿಂಗ್ ಗಾಗಿ ARRI ಅಲೆಕ್ಸಾ LF ಸಿಗ್ನೇಚರ್ ಪ್ರೈಮ್ ಲೆನ್ಸ್ ಬಳಸಲಾಗಿದೆ...

Published On :
ಪೊಗರು ಚಿತ್ರತಂಡ ಸಿನಿಮಾ ಸೆಟ್ ನಲ್ಲಿ ಹೊಸ ತಂತ್ರಜ್ಞಾನ ಬಳಸಿದ್ದಾರೆ, ಪೊಗರು ಸಿನಿಮಾ ಶೂಟಿಂಗ್ ಗಾಗಿ ARRI ಅಲೆಕ್ಸಾ LF ಸಿಗ್ನೇಚರ್ ಪ್ರೈಮ್ ಲೆನ್ಸ್ ಬಳಸಲಾಗಿದೆ.
ಕನ್ನಡ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಈ ಕ್ಯಾಮೆರಾ ಬಳಸಿದ್ದು ಚಿತ್ರಗಳು ಅದ್ಭುತವಾಗಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಸದ್ಯ ಹೈದರಾಬಾದ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ,ಕ್ಯಾಮೆರಾ ಸೆಟ್ ಅಪ್ ನಿಂದಾಗಿ ಪಿಕ್ಚರ್ ಕ್ವಾಲಿಟಿ ಅದ್ಭುತವಾಗಿದೆ, ಮ್ಯಾಕ್ಸಿಮಮ್ ರೆಸೂಲ್ಯೂಷನ್ ಇದೆ ಎಂದು ನಿರ್ದೇಶಕ ನಂದಕಿಶೋರ್ ಹೇಳಿದ್ದಾರೆ.
ಪೆಬ್ರವರಿಯಿಂದ ಮತ್ತೆ ಶೂಟಿಂಗ್ ಆರಂಭವಾಗಿದ್ದು, ಸಾಹಸ ನಿರ್ದೇಶಕ ಅನಲ್ ಅರಸು ಜೊತೆ ಫೈಟಿಂಗ್ ಸೀನ್ ಶೂಟಿಂಗ್ ಮಾಡಲಾಗುತ್ತಿದೆ. ಮುಂದಿನ 10 ದಿನಗಳಲ್ಲಿ ಫೈಟಿಂಗ್ ಸೀನ್ ಚಿತ್ರೀಕರಣ ಮುಗಿಯಲಿದೆ, ಸಿನಿಮಾಗೆ ಇನ್ನೂ ವಿಲ್ಲನ್ ಪಾತ್ರದಾರಿ ಆಯ್ಕೆಯಾಗಿಲ್ಲ, ಸಿನಿಮಾದಲ್ಲಿ ರವಿಶಂಕರ್, ಸಾಧು ಕೋಕಿಲಾ, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಮತ್ತಿತತರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


