ಸಿನಿಮಾ ಸುದ್ದಿ

ದಬಾಂಗ್ 3 ಆಯ್ತು, ಇದೀಗ ತಮಿಳು ಚಿತ್ರದಲ್ಲೂ ಕಿಚ್ಚ ಸುದೀಪ್ ವಿಲನ್!

ಇತ್ತೀಚಿಗೆ ತೆರೆಕಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ದಬಾಂಗ್ -೩ ಚಿತ್ರದಲ್ಲಿ ಚಂದನವನ ನಾಯಕ ಕಿಚ್ಚ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ದಬಾಂಗ್ 3 ಆಯ್ತು, ಇದೀಗ ತಮಿಳು ಚಿತ್ರದಲ್ಲೂ ಕಿಚ್ಚ ಸುದೀಪ್ ವಿಲನ್!
ಕಿಚ್ಚ ಸುದೀಪ್
Published On :

ಚೆನ್ನೈ: ಇತ್ತೀಚಿಗೆ  ತೆರೆಕಂಡಿರುವ  ಬಾಲಿವುಡ್   ಸೂಪರ್ ಸ್ಟಾರ್    ಸಲ್ಮಾನ್ ಖಾನ್ ಅವರ  ದಬಾಂಗ್ -೩ ಚಿತ್ರದಲ್ಲಿ    ಚಂದನವನ ನಾಯಕ ಕಿಚ್ಚ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ  ನಟನೆಗೆ ಸುದೀಪ್  ಎಲ್ಲಾ  ವರ್ಗದ ಪ್ರೇಕ್ಷಕರಿಂದಲೂ   ಪ್ರಶಂಸೆ ಪಡೆದುಕೊಂಡಿದ್ದಾರೆ.  ಆದರೆ, ಸುದೀಪ್ ಮತ್ತೊಮ್ಮೆ ಖಳನಾಯಕನಾಗಿ ನಟಿಸಲಿದ್ದಾರೆ.   ಆದರೆ ಈ ಬಾರಿ ತಮಿಳು ಚಿತ್ರದಲ್ಲಿ  ಖಳನಾಯಕರಾಗಿ  ಕಾಣಿಸಿಕೊಳ್ಳಲಿದ್ದಾರೆ. 

ಶಿಂಬು ನಾಯಕರಾಗಿ ಮಾನಡು ಎಂಬ ಚಿತ್ರ  ನಿರ್ಮಿಸುತ್ತಿದ್ದೇನೆ ಎಂದು ವೆಂಕಟ್ ಪ್ರಭು ೨೦೧೮ ರಲ್ಲಿ ಹೇಳಿದ್ದರು. ಆದರೆ, ಚಿತ್ರವನ್ನು ನಿರ್ಮಿಸುತ್ತಿದ್ದ  ಸುರೇಶ್ ಕಾಮಟ್ಜಿ  ಹಾಗೂ  ಶಿಂಬು ನಡುವಿನ  ಮನಸ್ತಾಪದಿಂದಾಗಿ ಚಿತ್ರ ನಿರ್ಮಾಣ ಸ್ಥಗಿತಗೊಂಡಿತ್ತು.    ನಾಯಕ ಶಿಂಬು ತಂದೆ,   ಪ್ರಸಿದ್ದ  ತಮಿಳು ನಿರ್ದೇಶಕ ಟಿ. ರಾಜೇಂದರ್  ಮಧ್ಯ ಪ್ರವೇಶದಿಂದ  ಮಾನಡು ಚಿತ್ರ  ಚಿತ್ರೀಕರಣ ಮುಂದುವರಿಸಿರುವುದಾಗಿ  ವೆಂಕಟ್ ಪ್ರಭು  ತಿಳಿಸಿದ್ದಾರೆ.

ಚಿತ್ರದ  ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ನಿರ್ಮಾಪಕ ಸುರೇಶ್ ಕಾಮತ್ಜಿ ಹೇಳಿದ್ದಾರೆ. ದಬಾಂಗ್ -೩ ಶೂಟಿಂಗ್ ಸಮಯದಲ್ಲಿಯೇ  ಸುದೀಪ್    ಆವರನ್ನು ಖಳನಾಯಕನಾಗಿ ನಟಿಸಲು ಕೇಳಲಾಯಿತು ಎಂದು ನಿರ್ಮಾಪಕ ಸುರೇಶ್ ಕಾಮತ್ಜಿ  ತಿಳಿಸಿದ್ದು, ಕಥೆ ಕೇಳಿದ ಕೂಡಲೇ ಸುದೀಪ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದರು. ಉಳಿದ ಪಾತ್ರವರ್ಗವನ್ನು ಶೀಘ್ರದಲ್ಲೇ  ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ರಾಜಮೌಳಿ ನಿರ್ದೇಶನದ ಈಗಾ ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ನಟಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.