ಸಿನಿಮಾ ಸುದ್ದಿ

ಆಫ್ರಿಕಾ ಟೂರ್ ಮುಗಿಸಿದ 'ರೆಮೋ'

ದಕ್ಷಿಣ ಆಫ್ರಿಕಾದ ವಿಚಿತ್ರ ವಿಶೇಷ ಸ್ಥಳಗಳಲ್ಲಿ 11 ದಿನಗಳ ಚಿತ್ರೀಕರಣ ಮುಗಿಸಿದ ಬಳಿಕ ರೆಮೋ ತಂಡವು ಗುರುವಾರ ಬೆಂಗಳೂರಿಗೆ ಮರಳಿದೆ.

ಆಫ್ರಿಕಾ ಟೂರ್ ಮುಗಿಸಿದ 'ರೆಮೋ'
ಆಫ್ರಿಕಾ ಟೂರ್ ಮುಗಿಸಿದ 'ರೆಮೋ'
Published On :

ದಕ್ಷಿಣ ಆಫ್ರಿಕಾದ ವಿಚಿತ್ರ ವಿಶೇಷ ಸ್ಥಳಗಳಲ್ಲಿ  11 ದಿನಗಳ ಚಿತ್ರೀಕರಣ ಮುಗಿಸಿದ ಬಳಿಕ  ರೆಮೋ ತಂಡವು ಗುರುವಾರ ಬೆಂಗಳೂರಿಗೆ ಮರಳಿದೆ. 

ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ಇಶಾನ್ ಮತ್ತು ಆಶಿಕಾ ರಂಗನಾಂತ್ ನಟಿಸಿದ್ದಾರೆ, ಇಮ್ರಾನ್ ಸರ್ಧರಿಯಾ ಅವರ ನೃತ್ಯ ಸಂಯೋಜನೆ ಮತ್ತು ಫೈಟ್ ಸ್ಟಂಟ್‌ಗಳನ್ನು ಒಳಗೊಂಡ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ, ಇದನ್ನು  ಡಿಫರೆಂಟ್ ಡ್ಯಾನಿ ನಿರ್ವಹಿಸಿದ್ದಾರೆ."ಈ ಸಂಪೂರ್ಣದೃಶ್ಯಾವಳಿಯು ಚಿತ್ರದ ಮೊದಲಾರ್ಧದಲ್ಲಿ ಕಾಣಿಸುತ್ತದೆ, ಇದಕ್ಕಾಗಿ ನಾವು ಕೇಪ್ ಟೌನ್, ಜೋಹಾನ್ಸ್‌ಬರ್ಗ್ ಮತ್ತು ಡರ್ಬನ್‌ನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ" ಪವನ್ ಹೇಳಿದ್ದಾರೆ.

ಚಿತ್ರೀಕರಣದ ಶೂಟಿಂಗ್ ಇನ್ನೂ ಪೂರ್ಣವಾಗಿಲ್ಲ. ರೊಮ್ಯಾಂಟಿಕ್ ಡ್ರಾಮಾ ಆಗಿರುವ ಚಿತ್ರದ ಮುಂದಿನ ದೃಶ್ಯಗಳನ್ನು ಸಿಂಗಾಪುರ, ಮಲೇಷ್ಯಾ ಮತ್ತು ಥೈಲ್ಯಾಂಡ್‌ ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಸಿದ್ದತೆ ನಡೆಸಿದೆ. ದೆ. ಸಿಆರ್ ಮನೋಹರ್ ನಿರ್ಮಿಸಿದ "ರೆಮೋ" ಗಾಗಿ  ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಸ್. ವೈದಿಯವರು ಛಾಯಾಗ್ರಹಣ ನೆರವೇರಿಸಿದ್ದಾರೆ.  ಚಿತ್ರದಲ್ಲಿ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಕಾರುಣ್ಯ ರಾಮ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.