'ಒಡೆಯ' ಬಿಡುಗಡೆ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ದರ್ಶನ್ ಅಭಿಮಾನಿಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ ಬಹು ನಿರೀಕ್ಷಿತ ಒಡೆಯ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟುಮಾಡಿದೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ ಬಹು ನಿರೀಕ್ಷಿತ ಒಡೆಯ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟುಮಾಡಿದೆ.
ಇದು ಈ ವರ್ಷ ಬಿಡುಗಡೆಯಾಗುತ್ತಿರುವ ದರ್ಶನ್ ಅವರ ಮೂರನೇ ಚಿತ್ರವಾಗಿದ್ದು, ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಯಜಮಾನ, ಆಗಸ್ಟ್ ತಿಂಗಳಲ್ಲಿ ಕುರುಕ್ಷೇತ್ರ ಚಿತ್ರಗಳು ಬಿಡುಗಡೆಯಾಗಿದ್ದವು.
ಯಜಮಾನ ಹಾಗೂ ಕುರುಕ್ಷೇತ್ರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದ್ದು, ಒಡೆಯ ಚಿತ್ರವೂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ ಡಿಬಾಸ್ ಅಭಿಮಾನಿಗಳು.
ದರ್ಶನ್ ಅವರ ಬೃಹದಾಕಾರದ ಕಟೌಟ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ಸಡಗರ, ಸಂಭ್ರಮದಿಂದ ಒಡೆಯನನ್ನು ಬರಮಾಡಿಕೊಂಡಿದ್ದಾರೆ.
ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಎಂಡಿ ಶ್ರೀಧರ್ ಹಾಗೂ ನಟ ದರ್ಶನ್ ಕಾಂಬಿನೇಷ್ ನ ಮೂರನೇ ಚಿತ್ರ ಇದಾಗಿದ್ದು, ತಮಿಳು ಚಿತ್ರ ವೀರಂ ರಿಮೇಕ್ ಆಗಿದೆ.
ಈ ಹಿಂದೆ ನಿರ್ದೇಶಿಸಿದ್ದ ಪೊರ್ಕಿ ಹಾಗೂ ಬುಲ್ ಬುಲ್ ಚಿತ್ರಗಳು ಶತದಿನ ಆಚರಿಸುವ ಮೂಲಕ ಉತ್ತಮ ಪ್ರದರ್ಶನ ಕಂಡಿದ್ದವು. ಹಾಗಾಗಿ ಮತ್ತೆ ಒಟ್ಟಾಗಿ ಸೇರಿ ಸಿನಿಮಾ ಮಾಡಿರುವುದಾಗಿ ನಿರ್ದೇಶಕ ಎಂಡಿ ಶ್ರೀಧರ್ ಹೇಳುತ್ತಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಕೃಷ್ಣ ಕುಮಾರ್ ಅವರ ಛಾಯಾಗ್ರಾಹಣವಿದೆ. ಸನಾ ತಿಮ್ಮಯ್ಯ , ರವಿಶಂಕರ್, ನಿರಂಜನ್, ದೇವರಾಜ್ , ಸಾಧು ಕೋಕಿಲ, ಚಿಕ್ಕಣ್ಣ ಮತ್ತಿತರ ತಾರಾಬಳಗವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


