ಟಗರು ಡಾಲಿ ಈಗ ವಿಲನ್ ಅಲ್ಲ, ಹೀರೋ!
"ಟಗರು" ಚಿತ್ರದ ಡಾಲಿ ಪಾತ್ರದ ಮೂಲಕ ಪ್ರಸಿದ್ದರಾದ ಧನಂಜಯ್ ಅವರ ಈ ಜನಪ್ರಿಯತೆಯ ಸಂಪೂರ್ಣ ಲಾಭ ಪಡೆಯಲು ಇದೀಗ ನಿರ್ದೇಶಕ ಪ್ರಭು ಶ್ರೀನಿವಾಸ್ ಸಿದ್ದವಾಗಿದ್ದಾರೆ.

"ಟಗರು" ಚಿತ್ರದ ಡಾಲಿ ಪಾತ್ರದ ಮೂಲಕ ಪ್ರಸಿದ್ದರಾದ ಧನಂಜಯ್ ಅವರ ಈ ಜನಪ್ರಿಯತೆಯ ಸಂಪೂರ್ಣ ಲಾಭ ಪಡೆಯಲು ಇದೀಗ ನಿರ್ದೇಶಕ ಪ್ರಭು ಶ್ರೀನಿವಾಸ್ ಸಿದ್ದವಾಗಿದ್ದಾರೆ.
ಯೋಗೇಶ್ ನಾರಾಯಣ್ ನಿರ್ಮಾಣದ ಮುಂಬರುವ ಚಿತ್ರಕ್ಕೆ "ಡಾಲಿ" ಎಂದು ನಾಮಕರಣ ಮಾಡಲಾಗಿದ್ದು ಧನಂಜಯ್ ನಿರ್ವಹಿಸಲಿರುವ ಈ ಹೆಸರಿನ ಪಾತ್ರ ಹಿಂದಿನ ಸೂರಿ ನಿರ್ದೇಶನದ ಚಿತ್ರದ ಪಾತ್ರದ ಮುಂದುವರಿಕೆಯಾಗಿದೆ ಎಂದು ಹೇಳಲಾಲ್ಗುತ್ತಿದೆ.
ಡಿಸೆಂಬರ್ 23 ರಂದು ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು "ಲಖನೌನಲ್ಲಿ ಸೆಟ್ ಹಾಕಿರುವ ನಮ್ಮ ನಿರ್ಧಾರದ ಹಿಂದಿನ ಒಂದು ಕಾರಣ ಇದು." ಎಂದು ನಿರ್ದೇಶಕರು ಹೇಳಿದ್ದಾರೆ.
"ಟಗರು ಚಿತ್ರದಲ್ಲಿ ಡಾಲಿ ಎಂಬ ಖಳನಾಯಕನಾಗಿ ನಟಿಸಿದ ಧನಂಜಯ್ ಕೂಡ ಅದೇ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಆದರೆ ಇಲ್ಲಿನ ಟ್ವಿಸ್ಟ್ ಎಂದರೆ ಆತ ಖಳನಾಯಕನಿಂದ ನಾಯಕನಾಗಲು ಚಿತ್ರದಲ್ಲಿ ಒಂದು ತಿರುವು ಬರಲಿದೆ.”ಎಂದು ನಿರ್ದೇಶಕರು ವಿವರಿಸುತ್ತಾರೆ, ನಾಯಕನ ಪಾತ್ರದ ಬಗ್ಗೆ ಒಂದು ಸೂಕ್ಷ್ಮ ನೋಟವನ್ನು ನೀಡಿರುವ ನಿರ್ದೇಶಕ "ಲಖನೌನಲ್ಲಿ ಸುಮಾರು 25 ದಿನಗಳವರೆಗೆ ಶೂಟಿಂಗ್ ನಿಗದಿಯಾಗಿದೆ. ಉಳಿದ ಭಾಗಗಳನ್ನು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುವುದು, ” ಎಂದರು.
ಎರಡು ಮಹಿಳಾ ನಾಯಕಿಯರಿರುವ "ಡಾಲಿ"ಯಲ್ಲಿ ಇದೇ ಮೊದಲ ಬಾರಿಗೆ ಧನಂಜಯ್ ಜತೆಗೆ ರಚಿತಾ ರಾಮ್ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುವುದನ್ನು ಕಾಣಬಹುದು. ಇನ್ನು ಭವ್ಯಾ ತ್ರಿಕಾ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ.ಇವರು ಚೆನ್ನೈನಲ್ಲಿ ನೆಲೆಸಿರುವವರಾಗಿದ್ದು ಇದಾಗಲೇ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಕನಿಷ್ಠ 200 ಜಾಹೀರಾತುಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.
ಅನೂಪ್ ಸೀಳನ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ಮತ್ತು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.ಶ್ರೀನಿವಾಸ್ ದೇವಮಾಸಮ್ ಚಿತ್ರಕಥೆ, ವಿನೋದ್ ಸ್ಟಂಟ್ ಹಾಗೂ ನೃತ್ಯ ಸಂಯೋಜನೆ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


