ಸಿನಿಮಾ ಸುದ್ದಿ

ಕೆಜಿಎಫ್ ದಾಖಲೆ ಧೂಳಿಪಟ ಮಾಡಲಿದೆ ಪೈಲ್ವಾನ್, ಆ ದಾಖಲೆ ಯಾವುದು ಗೊತ್ತ?

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಬಿಡುಗಡೆಯೊಂದಿಗೆ ಕೆಜಿಎಫ್ ಚಿತ್ರದ ದಾಖಲೆಯೊಂದನ್ನು ಧೂಳಿಪಟ ಮಾಡಲಿದೆ.

ಕೆಜಿಎಫ್ ದಾಖಲೆ ಧೂಳಿಪಟ ಮಾಡಲಿದೆ ಪೈಲ್ವಾನ್, ಆ ದಾಖಲೆ ಯಾವುದು ಗೊತ್ತ?
ಯಶ್-ಸುದೀಪ್
Published On :

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಬಿಡುಗಡೆಯೊಂದಿಗೆ ಕೆಜಿಎಫ್ ಚಿತ್ರದ ದಾಖಲೆಯೊಂದನ್ನು ಧೂಳಿಪಟ ಮಾಡಲಿದೆ.

ಹೌದು, ಯಶ್ ಅಭಿನಯದ ಕೆಜಿಎಫ್ ಚಿತ್ರ ಸಹ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಆದರೆ ಕೆಜಿಎಫ್ ಚಿತ್ರ ದೇಶಾದ್ಯಂತ ಸುಮಾರು 2500 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಪೈಲ್ವಾನ್ ಚಿತ್ರ ಏಕಕಾಲಕ್ಕೆ ಇದೀಗ 3000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. 

ಕೆಜಿಎಫ್ ಚಿತ್ರ ಉತ್ತರ ಭಾರತದಲ್ಲಿ 1500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪೈಲ್ವಾನ್ ಚಿತ್ರ 1600 ಥಿಯೇಟರ್ ಗಳಿಂದ 2000 ಥಿಯೇಟರ್ ವರೆಗೆ ಉತ್ತರ ಭಾರತದಲ್ಲೇ ಬಿಡುಗಡೆಯಾಗುತ್ತಿದೆ. ಇದಕ್ಕೆ ಕಾರಣ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಪೈಲ್ವಾನ್ ಚಿತ್ರದಲ್ಲಿ ಅಭಿನಯಿಸಿರುವುದು.

ಕರ್ನಾಟಕದಾದ್ಯಂತ ಕೆಆರ್ ಜಿ ಸ್ಟುಡಿಯೋಸ್ ಪೈಲ್ವಾನ್ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚು ತೆರಗಳಲ್ಲಿ ಪೈಲ್ವಾನ್ ವಿಜೃಂಬಿಸಲಿದೆ. ಇನ್ನು ತೆಲುಗಿನಲ್ಲಿ ವಾರಾಹಿ ಚಲನಚಿತ್ರ ಸಂಸ್ಥೆ ವಿತರಣಾ ಹಕ್ಕು ಪಡೆದಿದೆ. 

ತಮಿಳಿನಲ್ಲಿ ವೈಎನ್ ಟಿ ಓಎಕ್ಸ್ ಮಾರ್ಕೆಂಟಿಂಗ್ ಮತ್ತು ಮಲೆಯಾಳಂನಲ್ಲಿ ಪಲ್ಲವಿ ಸಂಸ್ಥೆ ವಿತರಣಾ ಹಕ್ಕನ್ನು ಪಡೆದುಕೊಂಡಿವೆ. ತೆಲುಗಿನಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ, ತಮಿಳು ಮತ್ತು ಮಲೆಯಾಳಂನಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 12ರಂದು ಚಿತ್ರ ದೇಶಾದ್ಯಂತ ತೆರೆಗಪ್ಪಳಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.