'ಬಿಚ್ಚುಗತ್ತಿ ಚಾಪ್ಟರ್-1' ಗಾಗಿ ಡಬ್ಬಿಂಗ್ ಸ್ಟುಡಿಯೊಗೆ ರಾಜವರ್ಧನ್ ಎಂಟ್ರಿ!
"ಬಿಚ್ಚುಗತ್ತಿ ಚಾಪ್ಟರ್-1 ದಳವಾಯಿ ದಂಗೆ" ಚಿತ್ರಕ್ಕಾಗಿ ಶುಕ್ರವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ರಾಜವರ್ಧನ್ ಡಬ್ಬಿಂಗ್ ನಡೆಸಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಈ ಐತಿಹಾಸಿಕ ಚಿತ್ರದಲ್ಲಿ ನಟ ರಾಜವರ್ಧನ್ 15 ನೇ ಶತಮಾನದ ಪಾಳೇಗಾರ ಭರಮಣ್ಣನಾಯಕನ ಪಾತ್ರ ವಹಿಸಿದ್ದಾರೆ.

"ಬಿಚ್ಚುಗತ್ತಿ ಚಾಪ್ಟರ್-1 ದಳವಾಯಿ ದಂಗೆ" ಚಿತ್ರಕ್ಕಾಗಿ ಶುಕ್ರವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ರಾಜವರ್ಧನ್ ಡಬ್ಬಿಂಗ್ ನಡೆಸಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಈ ಐತಿಹಾಸಿಕ ಚಿತ್ರದಲ್ಲಿ ನಟ ರಾಜವರ್ಧನ್ 15 ನೇ ಶತಮಾನದ ಪಾಳೇಗಾರ ಭರಮಣ್ಣನಾಯಕನ ಪಾತ್ರ ವಹಿಸಿದ್ದಾರೆ.
ರಾಜವರ್ಡನ್ ಅವರಿಗೆ ಡಬ್ಬಿಂಗ್ ಎಂಜಿನಿಯರ್ ರಾಜಶೇಖರ್ ಅವರ ಭಾಗಗಳನ್ನು ಡಬ್ ಮಾಡಲು ಸಹಾಯ ನೀಡಿದ್ದಾರೆ."ರಾಜಶೇಖರ್ ಅವರಿಗೆ ಭಾಷೆಯ ಮೇಲೆ ಉತ್ತಮ ಹಿಡಿತ ಇದೆ. ಅವರು ಸಾಕಷ್ಟು ಅರಿತಿದ್ದಾರೆ.ಅದರಲ್ಲಿಯೂ ಇತಿಹಾಸದ ಬಗೆಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇದೆ." ನಟ ಹೇಳಿದ್ದಾರೆ.ಅವರು ಇನ್ನೆರಡು ದಿನಗಳಲ್ಲಿ ತಮ್ಮ ಭಾಗದ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ.ಈ ಪಾತ್ರದ ನಿರ್ವಹಣೆಗೆ ಮುನ್ನ ನಟ ಹಲವು ವಿಧದ ತರಬೇತಿ ಹೊಂದಿದ್ದಾರೆ.
ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ "ಬಾಹುಬಲಿ" ಖ್ಯಾತಿಯ ಪ್ರಭಾಕರ್ ಕೂಡ ಖಳನಾಯಕನಾಗಿ ಮಿಂಚಿದ್ದಾರೆ.ಬಿ ಎಲ್ ವೇಣು ಬರೆದ ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇನ್ನು ಚಿತ್ರದ ಪ್ರಮುಖ ಪಾತ್ರಗಳಲ್ಲಿ ರೇಖಾ, ಕಲ್ಯಾಣಿ, ಶ್ರೀನಿವಾಸ್ ಮೂರ್ತಿ ಮತ್ತು ಡಿಂಗ್ರಿ ನಾಗರಾಜ್ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


