ಸಿನಿಮಾ ಸುದ್ದಿ

ಬಡವ-ರಾಸ್ಕಲ್ ಆಗಿ ಡಾಲಿ ಧನಂಜಯ್

ಟಗರು ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ನಟಿಸಿ ಪ್ರಸಿದ್ದವಾದ ಧನಂಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಯುವರತ್ನ, ಪೊಗರು, ಸಲಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಬಡವ ರಾಸ್ಕಲ್ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ....

ಬಡವ-ರಾಸ್ಕಲ್ ಆಗಿ ಡಾಲಿ ಧನಂಜಯ್
ಧನಂಜಯ್
Published On :

ಟಗರು ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ  ನಟಿಸಿ ಪ್ರಸಿದ್ದವಾದ ಧನಂಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಯುವರತ್ನ, ಪೊಗರು, ಸಲಗ  ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಬಡವ ರಾಸ್ಕಲ್ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.

ಶಂಕರ್ ನಿರ್ದೇಶನದ ಮೊಟ್ಟ ಮೊದಲ ಸಿನಿಮಾಗೆ ಧನಂಜಯ್ ಸಾಥ್ ನೀಡಿದ್ದಾರೆ, ಈ ಮೊದಲು ಶಂಕರ್ ಗುರು ಪ್ರಸಾದ್ ಸೇರಿದಂತೆ ಹಲವು ನಿರ್ದೇಶಕರುಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

ಗುಜ್ಜಾಲ್ ಟಾಕೀಸ್ ನಿರ್ಮಾಣದಲ್ಲಿ ಸಿನಿಮಾ ತಯಾರಾಗುತ್ತಿದೆ, ಈ ಸಿನಿಮಾ ಮೂಲಕ ಧನಂಜಯ್ ನಿರ್ಮಾಪಕರಾಗುತ್ತಿದ್ದಾರೆ, ಡಾಲಿ ಪಿಕ್ಟರ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ, ನಟ ಮತ್ತು ನಿರ್ದೇಶಕ ಇಬ್ಬರು ಬ್ಯಾಚ್ ಮೇಟ್ ಗಳಾಗಿದ್ದವರು. ಟಗರು ಸಿನಿಮಾದಿಂದ ಇಲ್ಲಿಯವರೆಗೂ ಶಂಕರ್ ಧನಂಜಯ್ ಜೊತೆ ಕೆಲಸ ಮಾಡಿಕೊಂಡು ಬಂದಿದ್ದಾರೆ,

ಆಡು ಭಾಷೆಯಲ್ಲಿ ಬಡವ-ರಾಸ್ಕಲ್ ಬಳಸುವ ಜನಪ್ರಿಯ ಬೈಗುಳವಾಗಿದೆ. ಈ ಹಿಂದೆ ಈ ಟೈಟಲ್ ಅನ್ನು ನಿರ್ದೇಶಕ ಯೋಗರಾಜ್ ಭಟ್ ರಿಜಿಸ್ಟ್ರಾರ್ ಮಾಡಿಸಿದ್ದರು, ಮನವಿ ಮೇರೆಗೆ ಈ ಟೈಟಲ್ ಕೊಟ್ಟಿದ್ದಾರೆ. ಆಗಸ್ಟ್ 23 ರಂದು ಮುಹೂರ್ತವಿದ್ದು  ಸೆಪ್ಟಂಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ,. ನಟ ಶಿವರಾಜ್ ಕುಮಾರ್ ಇಂದು ಸಿನಿಮಾ ಟೈಟಲ್ ಮತ್ತು ಪೋಸ್ಚರ್ ಅನಾರವರಣಗೊಳಿಸಲಿದ್ದಾರೆ. ಡಾಲಿ ಧನಂಜಯ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.