'ಭಿನ್ನ'ದ ವಿಭಿನ್ನ ಎಂಟ್ರಿ! ಆನ್ಲೈನ್ ಚಾನೆಲ್ ಝೀ 5 ಮೂಲಕ ಬಿಡುಗಡೆ
ಕನ್ನಡ ಚಿತ್ರರಂಗ ಇನ್ನೊಂದು ಹೊಸ ಇತಿಹಾಸ ಸೃಷ್ಟಿಗೆ ಸಿದ್ದವಾಗಿದೆ.ನಿರ್ದೇಶಕ ಆದರ್ಶ್ ಹೆಚ್ ಈಶ್ವರಪ್ಪ ಅವರು ತಮ್ಮಮುಂದಿನ ಚಿತ್ರವನ್ನು ಚಿತ್ರಮಂದಿರಗಳಿಗೆ ಬದಲಾಗಿ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆ ಮಾಡುವ.....

ಕನ್ನಡ ಚಿತ್ರರಂಗ ಇನ್ನೊಂದು ಹೊಸ ಇತಿಹಾಸ ಸೃಷ್ಟಿಗೆ ಸಿದ್ದವಾಗಿದೆ.ನಿರ್ದೇಶಕ ಆದರ್ಶ್ ಹೆಚ್ ಈಶ್ವರಪ್ಪ ಅವರು ತಮ್ಮಮುಂದಿನ ಚಿತ್ರವನ್ನು ಚಿತ್ರಮಂದಿರಗಳಿಗೆ ಬದಲಾಗಿ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಅವರು ಹಾಲಿವುಡ್ ಮತ್ತು ಬಾಲಿವುಡ್ ಪ್ರವೃತ್ತಿಯನ್ನು ಸ್ಯಾಂಡಲ್ ವುಡ್ ನಲ್ಲಿ ಜಾರಿಗೊಳಿಸಲು ಸಿದ್ದವಾಗಿದ್ದಾರೆ. ಶುದ್ಧಿ ನಿರ್ದೇಶಕ ಆದರ್ಶ್ ಅವರ ಮುಂದಿನ ಚಿತ್ರ ಭಿನ್ನವನ್ನು ಆನ್ಲೈನ್ ಚಾನೆಲ್ ಝೀ 5 ಮೂಲಕ ಬಿಡುಗಡೆ ಮಾಡಲಿದ್ದಾರೆ.
ಕನ್ನಡ ವೆಬ್ ಸರಣಿಗಳು ಇಂಡಸ್ಟ್ರಿಯಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಆದರ್ಶ್ ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಚಿತ್ರ ಬಿಡುಗಡೆಗೆ ಕೈ ಹಾಕುತ್ತಿದ್ದಾರೆ.ಮಹಾನ್ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಣೆ ಮಾಡಿರುವ ಈ ಚಿತ್ರದಲ್ಲಿ ಪಾಯಲ್ ರಾಧಾಕೃಷ್ಣ, ಸೌಮ್ಯ ಜಗನ್ಮೂರ್ತಿ, ಶಶಾಂಕ್ ಪುರುಷೋತ್ತಮ್ ಮತ್ತು ಸಿದ್ಧಾರ್ಥ್ ಮಾದ್ಯಮಿಕಾಅಭಿನಯವಿದೆ.
ಇನ್ನು ಚಿತ್ರ ಬಿಡುಗಡೆ ಬಗೆಗೆ ಪ್ರೊಡಕ್ಷನ್ ಹೌಸ್ ಆಗಿರುವ ಪರ್ಪಲ್ ರಾಕ್ ಎಂಟರ್ಟೈನರ್ಸ್ನಿಂದ ಅಧಿಕೃತ ಪ್ರಕಟಣೆ ಬಾಕಿ ಇದೆ."ಭಿನ್ನ" ಬೇರೆಲ್ಲಾ ಚಿತ್ರಕ್ಕಿಂತ ವಿಭಿನ್ನವಾಗಿದೆ. ಮತ್ತು ಚಿತ್ರವು ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿ ಎಂದು ಬಲ್ಲ ಮೂಲಗಳಿಂದ ಪತ್ರಿಕೆಗೆ ಮಾಹಿತಿ ಬಂದಿದೆ.
ಚಿತ್ರವಿದಾಗಲೇ 9 ನೇ ದಾದಾಸಾಹೇಬ್ ಫಾಲ್ಕೆ ಎಕ್ಸಲೆನ್ಸ್ ಅವಾರ್ಡ್ನಲ್ಲಿ ಅತ್ಯುತ್ತಮ ಚಿತ್ರಕಥೆ ತೀರ್ಪುಗಾರರ ಪ್ರಶಸ್ತಿ ಪಡೆದುಕೊಂಡಿದೆ.ಯಾವುದೇ ಹಾಡುಗಳಿಲ್ಲದ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರಕ್ಕೆ ಜೆಸ್ಸಿ ಕ್ಲಿಂಟನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


