ನಟ ಅಜಯ್ ರಾವ್ ಮನೇಲಿದ್ದಾನೆ ಪುಟಾಣಿ ಬಸವಣ್ಣ!
ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಅಜಯ್ ರಾವ್ ಎಂದೇ ಖ್ಯಾತನಾದ ನಟ ಅಜಯ್ ರಾವ್ ಅವರ ಮನೆಯಲ್ಲಿ ಪುಟಾಣಿ ಬಸವಣ್ಣನಿದ್ದಾನೆ!

Published On :
ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಅಜಯ್ ರಾವ್ ಎಂದೇ ಖ್ಯಾತನಾದ ನಟ ಅಜಯ್ ರಾವ್ ಅವರ ಮನೆಯಲ್ಲಿ ಪುಟಾಣಿ ಬಸವಣ್ಣನಿದ್ದಾನೆ! ಹೌದು ಅಜಯ್ ರಾವ್ ಪತ್ನಿ ಸ್ವಪ್ನಾ ರಾವ್ ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ಹಂಚಿಕೊಂಡ ಫೋಟೋ ಒಂದು ಇದೀಗ ಭಾರೀ ವೈರಲ್ ಆಗಿದೆ.
ಸ್ವಪ್ನಾ ರಾವ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪುತ್ರಿ ಚರಿಷ್ಮಾಳ ಫೋಟೋ ಹಾಕಿಕೊಂಡಿದ್ದು ಇದರ ಜತೆಯಲ್ಲೇ "ನಮ್ಮನೆಯ ಪುಟ್ಟ ಬಸವಣ್ಣ" ಎಂದು ಬರೆದುಕೊಂಡಿದ್ದಾರೆ.
ಸ್ವಪ್ನಾ ಅವರ ಈ ಫೋಟೋಗೆ ಅವರ ಅಭಿಮಾನಿಗಳು ಫಿದಾ ಆಗಿದ್ದು ಕ್ಯೂಟ್ ಬೇಬಿಯ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವೆಂಬರ್ 23, 2018ರಂದು ಅಜಯ್ ರಾವ್-ಸ್ವಪ್ನಾ ದಂಪತಿಗೆ ಚರಿಷ್ಮಾ ಜನಿಸಿದ್ದಳು. ಡಿಸೆಂಬರ್ 2ರಂದು ಮಗುವಿನ ನಾಮಕರಣ ಸಮಾರಂಭ ಏರ್ಪಡಾಗಿತ್ತು.ಈ ವೇಳೆ ನಟ ತಮ್ಮ ಪತ್ನಿ ಹಾಗೂ ಪುಟ್ಟ ಮಗಳೊಡನೆ ತೆಗೆಸಿಕೊಂಡ ಫೋಟೋ ವೈರ;ಲ್ ಆಗಿತ್ತು.
ಸಧ್ಯ ಅಜಯ್ ರಾವ್ ತಮ್ಮ ಕುಟುಂಬ, ಪರಿವಾರದವರೊಡನೆ ಸಮಯ ಕಳೆಯುತ್ತಿದ್ದು ಆಗಾಗ ಮಗಳ ಜತೆಗಿನ ತ್ಂಟಾಟದ ಫೋಟೋಗಳನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


