ದಾಂಪತ್ಯದಲ್ಲಿ ಬಿರುಕು?: ಪತ್ನಿಯ ಫೇಸ್ ಬುಕ್ ಪೋಸ್ಟ್ ಗೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸ್ಪಷ್ಟನೆ
ಗಾಯಕಿ ವಾಣಿ ಹರಿಕೃಷ್ಣ (ಅಕ್ಷರಾ ಹರಿ) ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ನೊಂದು ಹಾಕಿದ್ದ ಪೋಸ್ಟ್ ಬಗ್ಗೆ ಸಂಗೀತ ನಿರ್ದೇಥಶಕ ವಿ, ಹರಿಕೃಷ್ಣ ಸ್ಪಷ್ಟನೆ ನೀಡಿದ್ದಾರೆ....

Published On :
ಬೆಂಗಳೂರು: ಗಾಯಕಿ ವಾಣಿ ಹರಿಕೃಷ್ಣ (ಅಕ್ಷರಾ ಹರಿ) ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ನೊಂದು ಹಾಕಿದ್ದ ಪೋಸ್ಟ್ ಬಗ್ಗೆ ಸಂಗೀತ ನಿರ್ದೇಥಶಕ ವಿ, ಹರಿಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
"ನಮ್ಮಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗಿರುವುದು ಸತ್ಯಕ್ಕೆ ದೂರವಾದುದು. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಅವಳು ಹಾಡಿದ್ದ ಹಾಡನ್ನು ಮತ್ತೆ ಬೇರೆಯವರು ಹಾಡಿದ್ದಕ್ಕೆ ಬೇಸರವಾಗಿ 'ಫೇಸ್‌ಬುಕ್'ನಲ್ಲಿ ಮಾಡಿದ್ದಾಳೆ ಅಷ್ಟೇ, ಫೇಸ್‌ಬುಕ್'ನಲ್ಲಿ ಮಾಡಿದ ಪೋಸ್ಟ್ ಏನೇನೋ ಟರ್ನ್ ತೆಗೆದುಕೊಂಡು ಸತ್ಯಕ್ಕೆ ದೂರವಾದ ಸುದ್ದಿ ಹಬ್ಬಿಬಿಟ್ಟಿದೆ ಎಂದು ಹೇಳಿದ್ದಾರೆ.
'ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ' ಎಂದು ಕೆಲವು ಮಾಧ್ಯಮಗಳಲ್ಲಿ ಹಬ್ಬಿರುವ ಸುದ್ದಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಸ್ಪಷ್ಟನೆ ಕೊಟ್ಟು "ಇವೆಲ್ಲ ಕಪೋಲ ಕಲ್ಪಿತ ಸುದ್ದಿಗಳು. 'ಕುರುಕ್ಷೇತ್ರ' ಹಾಗೂ 'ರಾಂಧವ' ಚಿತ್ರಗಳಲ್ಲಿ ತಮ್ಮಿಂದ ಮೊದಲು ಹಾಡಿಸಿದ್ದ ಹಾಡನ್ನು ತೆಗೆದುಹಾಕಿ ಬಳಿಕ ಬೇರೆಯವರಿಂದ ಹಾಡಿಸಲಾಗಿದೆ ಎಂದು ನನ್ನ ಪತ್ನಿ ವಾಣಿ 'ಫೇಸ್‌ಬುಕ್'ನಲ್ಲಿ ಪೋಸ್ಟ್ ಮಾಡಿದ್ದರು. ಅದು ವೃತ್ತಿಗೆ ಸಂಬಂಧಿಸಿ ಹೊರಹಾಕಿದ ಬೇಸರ ಅಷ್ಟೇ. ಅದನ್ನು ಸಂಸಾರಕ್ಕೆ ಎಳೆದು ತಂದು ಕಪೋಲ ಕಲ್ಪಿತ ಸುದ್ದಿ ಮಾಡಲಾಗಿದೆ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


