ಸಿನಿಮಾ ಸುದ್ದಿ

'100' ಚಿತ್ರದ ಮೂಲಕ ಮತ್ತೊಮ್ಮೆ ಪೋಲೀಸ್ ತನಿಖೆಗಿಳಿದ ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ ತಮ್ಮ ತನಿಖಾಧಿಕಾರಿ ಪಾತ್ರದ ಮೂಲಕ ಇನ್ನೊಮ್ಮೆ ಪ್ರೇಕ್ಷಕರ ಮನರಂಜಿಸಲು ಬರುತ್ತಿದ್ದಾರೆ. ಅವರ ಮುಂದಿನ ಚಿತ್ರ "100" ನಲ್ಲಿ ಅವರು ಮತ್ತೊಮ್ಮೆ ಪೋಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

'100' ಚಿತ್ರದ ಮೂಲಕ ಮತ್ತೊಮ್ಮೆ ಪೋಲೀಸ್ ತನಿಖೆಗಿಳಿದ ರಮೇಶ್ ಅರವಿಂದ್
"100" ಚಿತ್ರದ ದೃಶ್ಯ
Published On :
ನಟ ರಮೇಶ್ ಅರವಿಂದ್ ತಮ್ಮ ತನಿಖಾಧಿಕಾರಿ ಪಾತ್ರದ ಮೂಲಕ ಇನ್ನೊಮ್ಮೆ ಪ್ರೇಕ್ಷಕರ ಮನರಂಜಿಸಲು ಬರುತ್ತಿದ್ದಾರೆ. ಅವರ ಮುಂದಿನ ಚಿತ್ರ "100" ನಲ್ಲಿ ಅವರು ಮತ್ತೊಮ್ಮೆ ಪೋಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಪತ್ರಿಕೆಯೊಡನೆ ಮಾತನಾಡಿದ ರಮೇಶ್ “ವೈವಿಧ್ಯತೆಯುಳ್ಳ ಪಾತ್ರ ಸಿಕ್ಕುವವರೆಗೆ ಪೊಲೀಸ್ ಅಧಿಕಾರಿಯಾಗುವುದು ಒಳ್ಳೆಯದು. ಭೈರಾದೇವಿಯಲ್ಲಿಕ್ರೈಂ ಬ್ರ್ಯಾಂಚ್ ಪೋಲೀಸ್ ಆಗಿದ್ದೇನೆ. ಅದೇ ಶಿವಾಜಿ ಸುರತ್ಕಲ್ ನಲ್ಲಿ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಮುಂಬರುವ ಚಿತ್ರ 100 ರಲ್ಲಿ, ಸೈಬರ್ ಅಪರಾಧ ಕೋಶಕ್ಕೆ ಸೇರಿದ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಾನು ನಿರ್ವಹಿಸುತ್ತೇನೆ. ” ಎಂದಿದ್ದಾರೆ.
ಚಿತ್ರದಲ್ಲಿ ನಟ ರಮೇಶ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರಿಗೆ ನಾಯಕಿಯಾಗಿ ರಚಿತಾ ರಾಮ್ ಮತ್ತು ಪೂರ್ಣಾ ಅಭಿನಯಿಸಿದ್ದಾರೆ.ಈ ಹಿಂದೆ ಉಪ್ಪು ಹುಳಿ ಖಾರ, ನಾತಿಚರಾಮಿಮತ್ತು ಪಡ್ಡೇಹುಲಿ ಚಿತ್ರದ ತಯಾರಾಕರಾಗಿದ್ದ ರಮೇಶ್ ರೆಡ್ಡಿ "100 " ಚಿತ್ರ ನಿರ್ಮಿಸಿದ್ದಾರೆ. ಪ್ರಸ್ತುತ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದ್ದು ಸುಮಾರು 60 ಭಾಗದ ಚಿತ್ರೀಕರಣ ಇದಾಗಲೇ ಮುಕ್ತಾಯವಾಗಿದೆ/ಚಿತ್ರಕ್ಕೆ ರವಿ ಬಸ್ರೂರ್ ಸಂಗೀತವಿದೆ, ಸತ್ಯ ಹೆಗ್ಡೆ ಡಿಒಪಿ, ಮತ್ತು ಆಕಾಶ್ ಶ್ರೀವತ್ಸ ಸಂಕಲನಕಾರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.