ಸಿನಿಮಾ ಸುದ್ದಿ

'ನೈಟ್ ಔಟ್' ನ ಭಾಗವಾಗಿದ್ದಕ್ಕಾಗಿ ನನಗೆ ಖುಷಿ ಇದೆ: ಶ್ರುತಿ ಗೊರಾಡಿಯಾ

ರಾಕೇಶ್ ಅಡಿಗ ಅವರ ಚೊಚ್ಚಲ ನಿರ್ದೇಶನದ ಚಿತ್ರ "ಅನೈಟ್ ಔಟ್" ಈ ವಾರ ತೆರೆ ಕಾಣಲು ಸಿದ್ದವಾಗಿದೆ. ರಾಕೇಶ್ ಸ್ವತಃ ಕಥೆ ಬರೆದು ನಿರ್ದೇಶನವನ್ನೂ ಮಡಿರುವ ಈ ಚಿತ್ರದಲ್ಲಿ "ಸಂಕಷ್ಟ ಕರ ಗಣಪತಿ" ಚಿತ್ರದ ....

'ನೈಟ್ ಔಟ್' ನ ಭಾಗವಾಗಿದ್ದಕ್ಕಾಗಿ ನನಗೆ ಖುಷಿ ಇದೆ: ಶ್ರುತಿ ಗೊರಾಡಿಯಾ
ಶ್ರುತಿ ಗೊರಾಡಿಯಾ
Published On :
ಬೆಂಗಳೂರು: ರಾಕೇಶ್ ಅಡಿಗ ಚೊಚ್ಚಲ ನಿರ್ದೇಶನದ ಚಿತ್ರ "ಅನೈಟ್ ಔಟ್" ಈ ವಾರ ತೆರೆ ಕಾಣಲು ಸಿದ್ದವಾಗಿದೆ. ರಾಕೇಶ್ ಸ್ವತಃ ಕಥೆ ಬರೆದು ನಿರ್ದೇಶನವನ್ನೂ ಮಡಿರುವ ಈ ಚಿತ್ರದಲ್ಲಿ "ಸಂಕಷ್ಟ ಕರ ಗಣಪತಿ" ಚಿತ್ರದ ನಾಯಕಿ ಶ್ರುತಿ ಗೊರಾಡಿಯಾ ಅಭಿನಯಿಸಿದ್ದಾರೆ. "ರಾಕೇಶ್ ನನ್ನ ಅಭಿನಯದ ಸಂಕಷ್ಟಕರ.... ಚಿತ್ರದ ಟ್ರೇಲರೆ ನೊಡಿದ್ದರು  ತಕ್ಷಣ ಆಡಿಷನ್ ಗೆ ಕರೆದರು  ಆದರೆ ಪ್ರಾರಂಭದಲ್ಲಿ ನನ್ನ ಲುಕ್ ಚಿತ್ರದ ಪಾತ್ರಕ್ಕೆ ಸರಿಹೊಂದುವುದಿಲ್ಲ ಎಂದು ದು ಅವರು ಭಾವಿಸಿದರು. ಹೇಗಾದರೂ, ನಾನು ಅವರಿಗೆ ಈ ಕುರಿತು ಮನವರಿಕೆ ಮಾಡಿಸಿಕೊಟ್ಟಿದ್ದೆ, ಇದೀಗ ನನಗೆ ಖುಷಿಯಾಗಿದೆ." ಶ್ರುತಿ ಹೇಳಿದ್ದಾರೆ.
"ಸವಾಲಿನ ಪಾತ್ರಗಳಲ್ಲಿ ಅಭಿನಯಿಸಲು ನಾನು ಸದಾ ಒಪ್ಪುತ್ತೇನೆ. ಇದು ನನ್ನನ್ನು ನಾನು ಸಾಬೀತುಪಡಿಸಿಕೊಳ್ಲಲು ಸಹಾಯಕವಾಗಲಿದೆ.ನಾನು ಬಹುದೂರ ನಡೆಯಬೇಕಾಗಿರುವ ಯಾವುದಾದರೂ ದಾರಿ ಇದ್ದರೆ ಅದು ಚಿತ್ರೋದ್ಯಮ. ಅಂತಿಮವಾಗಿ, ನಾವು ಯಾವ ರೀತಿಯ ಪಾತ್ರಗಳಲ್ಲಿ ಭಾಗವಹಿಸಬೇಕೆಂಬುದನ್ನು ನಾವು ನಿರ್ಧರಿಸಬೇಕು," ಎಂದು ಅವರು ಹೇಳುತ್ತಾರೆ.
ಈ ವಾರ "ನೈಟ್ ಔಟ್" ಬಿಡುಗಡೆಯಾಗುದನ್ನು ಶ್ರುತಿ ಎದುರು ನೋಡುತ್ತಿದ್ದಾರೆ. ಆಕೆಯ ಮುಂದಿನ ಚಿತ್ರದ ಕುರಿತು ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ."ನಾನು ಕೆಲವು ಆಫರ್ ಗಳನ್ನು ಪಡೆಇದ್ದೇನೆ, ಆದರೆ ನನಗೆ ಹಣಕಾಸಿನ ಕಾರಣದಿಂದಾಗಿಯೂ, ಪಾತ್ರದ ಕಾರಣದಿಂದಾಗಿಯೂ ಯಾವುದೂ ಇಷ್ಟವಾಗಿಲ್ಲ. ಆದರೆ ಓರ್ವ ನಟಿಯಾಗಿ ಉತ್ತಮ ಕಥೆಗಳು ಮತ್ತು ಪಾತ್ರಗಳನ್ನು ಹುಡುಕುವುದು ನಾನು ಮುಖ್ಯವೆಂದುಕೊಳ್ಳುತ್ತೇನೆ. ನನಗೆ ಅತ್ಯುತ್ತಮ ಆಫರ್ ಸಿಕ್ಕುವ ಭರವಸೆ ಇದೆ." ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.