'ಬ್ರಹ್ಮಚಾರಿ'ಗೆ ಅದಿತಿ ಪ್ರಭುದೇವ ನಾಯಕಿ
ಕಿರುತೆರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಟಿ ಅದಿತಿ ಪ್ರಭುದೇವ, ಕನ್ನಡ ಸಿನಿಮಾರಂಗದಲ್ಲಿ ಕೈ ತುಂಬಾ ಸಿನಿಮಾಗಳಿರುವ ನಟಿ, ತಮ್ಮ ಅತ್ಯುತ್ತಮವಾದ ಕೆಲಸದ ...

Published On :
ಕಿರುತೆರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಟಿ ಅದಿತಿ ಪ್ರಭುದೇವ, ಕನ್ನಡ ಸಿನಿಮಾರಂಗದಲ್ಲಿ ಕೈ ತುಂಬಾ ಸಿನಿಮಾಗಳಿರುವ ನಟಿ, ತಮ್ಮ ಅತ್ಯುತ್ತಮವಾದ ಕೆಲಸದ ಮೂಲಕ ನಿರ್ದೇಶಕರ ಗಮನ ಸೆಳೆದಿರುವ ಅದಿತಿ, ಸಿಂಗ ನಂತರ ಉದಯ್ ಕೆ ಮಹ್ತಾ ಅವರ ಬ್ರಹ್ಮಾಚಾರಿ ಸಿನಿಮಾದಲ್ಲಿ ನೀನಾಸಂ ಸತೀಶ್ ಗೆ ಜೋಡಿಯಾಗುತ್ತಿದ್ದಾರೆ.
ಏಪ್ರಿಲ್ 14 ರಂದು ಸಿನಿಮಾ ಮೂಹೂರ್ಥ ನಡೆಯಲಿದ್ದು, ಅದಾದ ನಂತರ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ಸಿಂಗದಲ್ಲಿ ಆಕೆಯ ಉತ್ತಮ ಕೆಲಸ ನೋಡಿ, ತಮ್ಮ ಮುಂದಿನ ಚಿತ್ರಕ್ಕೆ ಆಕೆಯೇ ಬೆಸ್ಟ್ ಎಂದು ನಿರ್ಧರಿಸಿದರಂತೆ, ಸತೀಶ್ ಗೆ ನಾಯಕಿಯಾಗಿ ಅದಿತಿ ಬೆಸ್ಟ್ ಎಂದು ಹೇಳಿದ್ದಾರೆ. ನಿರ್ಮಾಪಕರ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ,
ಸಿಂಗ ಹೊರತು ಪಡಿಸಿ ಅದಿತಿ ಪ್ರಭುದೇವ ಕೈಯ್ಯಲ್ಲಿ ಹಲವು ಸಿನಿಮಾಗಳಿವೆ, ಆಪರೇಷನ್ ನಕ್ಷತ್ರ, ರಂಗನಾಯಕಿ, ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


