ಸಿನಿಮಾ ಸುದ್ದಿ

ಕನ್ನಡದಲ್ಲಿ ಡಬ್ ಆಗಿ ಕರ್ನಾಟಕದಾದ್ಯಂತ 'ಕಾಂಚನ 3' ಚಿತ್ರ ಬಿಡುಗಡೆ!

ಇತ್ತೀಚೆಗೆ ಡಬ್ಬಿಂಗ್ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ಜಾಸ್ತಿಯಾಗುತ್ತಿದ್ದು ತಮಿಳು ನಟ ಅಜಿತ್ ಅಭಿನಯದ ವಿಸ್ವಾಸಂ ಚಿತ್ರ ಕನ್ನಡದಲ್ಲಿ ಜಗಮಲ್ಲ ಹೆಸರಿನಲ್ಲಿ ಬಿಡುಗಡೆಯಾಗಿತ್ತು.

ಕನ್ನಡದಲ್ಲಿ ಡಬ್ ಆಗಿ ಕರ್ನಾಟಕದಾದ್ಯಂತ 'ಕಾಂಚನ 3' ಚಿತ್ರ ಬಿಡುಗಡೆ!
ರಾಘವ ಲಾರೆನ್ಸ್
Published On :
ಇತ್ತೀಚೆಗೆ ಡಬ್ಬಿಂಗ್ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ಜಾಸ್ತಿಯಾಗುತ್ತಿದ್ದು ತಮಿಳು ನಟ ಅಜಿತ್ ಅಭಿನಯದ ವಿಸ್ವಾಸಂ ಚಿತ್ರ ಕನ್ನಡದಲ್ಲಿ ಜಗಮಲ್ಲ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಇದೀಗ ನಟ-ನಿರ್ದೇಶಕ ರಾಘವ ಲಾರೆನ್ಸ್ ಅಭಿನಯದ ಕಾಂಚನ 3 ಚಿತ್ರ ಬಿಡುಗಡೆಗೆ ಮುಂದಾಗಿದೆ.
ಕಾಂಚನ 3 ಇದೇ ತಿಂಗಳ 19ಕ್ಕೆ ಬಿಡುಗಡೆಯಾಗುತ್ತಿದೆ. ತಮಿಳಿನ ಈ ಚಿತ್ರ ತೆಲುಗು ಹಾಗೂ ಕನ್ನಡಕ್ಕೆ ಡಬ್ ಆಗುತ್ತಿದೆ. ಕಾಂಚನ ಸರಣಿಯ ಎರಡು ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗಿತ್ತು. ಉಪೇಂದ್ರ ಈ ಸಿನಿಮಾದಲ್ಲಿ ನಾಯಕನಾಗಿದ್ದರು. ಆದರೇ ಇದೀಗ ಮೂರನೇ ಸಿನಿಮಾ ನೇರವಾಗಿ ಡಬ್ ಆಗಿ ಬರುತ್ತಿದೆ.
ನಟನೆ ಜೊತೆಗೆ ನಾಯಕನಾಗಿ ರಾಘವ ಲಾರೆನ್ಸ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ವೇದಿಕಾ ಲಾರೆನ್ಸ್ ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಕೆಎಸ್ಕೆ ಶೋ ರೀಲ್ ಹಾಗೂ ಬಸವರಾಜ್ ಈ ಚಿತ್ರದ ಕರ್ನಾಟಕದ ವಿತರಣೆಯನ್ನು ಪಡೆದುಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.