ಸಲ್ಮಾನ್ ಖಾನ್ ಅಭಿನಯದ ದಬಾಂಗ್-3: ಮೇ ಮೊದಲ ವಾರದಿಂದ ಶೂಟಿಂಗ್ ನಲ್ಲಿ ಸುದೀಪ್ ಭಾಗಿ
ಪ್ರಭುದೇವ ನಿರ್ದೇಶನದ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದ ಚಿತ್ರೀಕರಣ ಇಂದೋರ್ ನಲ್ಲಿ ಇಂದಿನಿಂದ ಆರಂಭವಾಗುತ್ತಿದ್ದು, ಮೇ ಮೊದಲ ವಾರದಿಂದ ಕಿಚ್ಚ ಸುದೀಪ್ ಕೂಡಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಬೆಂಗಳೂರು: ಪ್ರಭುದೇವ ನಿರ್ದೇಶನದ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದ ಚಿತ್ರೀಕರಣ ಇಂದೋರ್ ನಲ್ಲಿ ಇಂದಿನಿಂದ ಆರಂಭವಾಗುತ್ತಿದ್ದು, ಮೇ ಮೊದಲ ವಾರದಿಂದ ಕಿಚ್ಚ ಸುದೀಪ್ ಕೂಡಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಪೊಂಕ್, ರಣ್, ಮತ್ತು ರಕ್ತ ಚರಿತ್ರ ಚಿತ್ರಗಳಲ್ಲಿ ಅಭಿನಯದ ಮೂಲಕ ಬಾಲಿವುಡ್ ನಲ್ಲಿ ಹೆಸರಾಗಿರುವ ಕಿಚ್ಚ ಸುದೀಪ್ ದಬಾಂಗ್ -3ರಲ್ಲಿ ವಿಲಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸುದೀಪ್ ಅಭಿನಯದ ತೆಲುಗು ಚಿತ್ರ ಈಗಾ ಹಿಂದಿಯಲ್ಲಿ ಮಕ್ಕಿ ಚಿತ್ರವಾಗಿ ಬಿಡುಗಡೆಯಾಗಿತ್ತು. ದಶಕದ ನಂತರ ಸುದೀಪ್ ಮತ್ತೆ ಬಾಲಿವುಡ್ ನಲ್ಲಿ ಅಭಿನಯಿಸುತ್ತದ್ದಾರೆ. ಸಲ್ಮಾನ್ ಖಾನ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಈ ಚಿತ್ರದ ಬಗ್ಗೆ ವಿಷಯವನ್ನು ಹಂಚಿಕೊಂಡಿದ್ದಾರೆ.
ದಬಾಂಗ್ -3 ಚಿತ್ರದ ಚಿತ್ರೀಕರಣಕ್ಕಾಗಿ ತಮ್ಮ ಹುಟ್ಟೂರು ಇಂದೋರ್ ನ ಮಂಡಲೇಶ್ವರ ಹಾಗೂ ಮಹೇಶ್ವರ ನಗರಕ್ಕೆ ಸಹೋದರ್ ಅರ್ಬಾಜ್ ಖಾನ್ ಜೊತೆ ಬಂದಿಳಿದಿರುವುದಾಗಿ ಸಲ್ಮಾನ್ ಖಾನ್ ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


