ಸಿನಿಮಾ ಸುದ್ದಿ

ಟಾಲಿವುಡ್ ನಲ್ಲೂ 'ಪಂಚತಂತ್ರ' ಚಿತ್ರೀಕರಣಕ್ಕೆ ಸಿದ್ಧತೆ

ಕಳೆದ ವಾರ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ ರೋಮ್ಯಾಂಟಿಕ್ ಡ್ರಾಮ ಪಂಚತಂತ್ರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಐಪಿಎಲ್, ಚುನಾವಣಾ ಸಂದರ್ಭದಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಟಾಲಿವುಡ್ ನಲ್ಲೂ 'ಪಂಚತಂತ್ರ' ಚಿತ್ರೀಕರಣಕ್ಕೆ ಸಿದ್ಧತೆ
ಪಂಚತಂತ್ರದ ಪೋಸ್ಟರ್
Published On :

ಕಳೆದ ವಾರ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ ರೋಮ್ಯಾಂಟಿಕ್ ಡ್ರಾಮ ಪಂಚತಂತ್ರ  ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಐಪಿಎಲ್, ಚುನಾವಣಾ ಸಂದರ್ಭದಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಹಾನ್, ಸೊನಾಲ್ ಮಾಂಟೆರೋ  ಮತ್ತು ರಂಗಾಯಣ ರಘು ಮೊದಲಾದವರು ನಟಿಸಿರುವ ಪಂಚತಂತ್ರದ ಸೆಕೆಂಡ್ ಹಾಪ್ ನಲ್ಲಿ ಮಂಡ್ಯ ರಾಜಕೀಯಕ್ಕೆ ಹೋಲಿಸಲಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ.

ಆದಾಗ್ಯೂ, ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಚಿತ್ರ ಮಾಡಿರುವುದಾಗಿ ನಿರ್ದೇಶಕರು ಸ್ಪಷ್ಪಪಡಿಸಿದ್ದಾರೆ.  ಚಿತ್ರದಲ್ಲಿನ ಅಂಶಗಳು ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಅಭ್ಯರ್ಥಿಯನ್ನು ಬೆಂಬಲಿಸುವವರಿಗೆ ಸಂಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಪಾರದ್ಕರ್  ನಿರ್ಮಾಣದ ಈ ಚಿತ್ರಕ್ಕೆ ವಿ, ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರದ ಯಶಸ್ಸಿನಿಂದ ಉತ್ಸಾಹಗೊಂಡಿರುವ ಚಿತ್ರ ತಂಡ ತೆಲುಗಿನಲ್ಲೂ ಚಿತ್ರ ನಿರ್ಮಿಸುತ್ತಿದೆ. ಆಂಧ್ರ v/s ತೆಲಂಗಾಣ ಎಂದು ಈ ಚಿತ್ರಕ್ಕೆ ಹೆಸರಿಡಲಾಗುತ್ತಿದೆ .ಆಂಧ್ರದ ನಿರ್ಮಾಪಕರಾದ ಅಶ್ವಿನಿ ದತ್ ಮತ್ತು ಸ್ವಪ್ನ ದತ್ ಪಂಚತಂತ್ರ  ಚಿತ್ರ ವೀಕ್ಷಿಸಿದ್ದು, ತೆಲುಗು ಹಾಗೂ ಹಿಂದಿ ಆವೃತ್ತಿಯಲ್ಲಿ ಚಿತ್ರ ಮಾಡುವ ಚಿಂತನೆಯಲ್ಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಆದಾಗ್ಯೂ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.