ಕೂತುಹಲ ಮೂಡಿಸಿದೆ ನಿರ್ದೇಶಕ ಪ್ರೇಮ್ 'ಏಕ್ ಲವ್ ಯ' ಸಿನಿಮಾ ಟೈಟಲ್
ತಮ್ಮ ಭಾವಮೈದುನ ಅಭಿಷೇಕ್ ರಾವ್ ನಟನೆಯ ಸಿನಿಮಾಗೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ, ಭಾನುವಾರ ಪತ್ನಿ ರಕ್ಷಿತಾ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಈ ...

Published On :
ತಮ್ಮ ಭಾವಮೈದುನ ಅಭಿಷೇಕ್ ರಾವ್ ನಟನೆಯ ಸಿನಿಮಾಗೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ, ಭಾನುವಾರ ಪತ್ನಿ ರಕ್ಷಿತಾ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಈ ವಿಷಯವನ್ನ ಪ್ರೇಮ್ ಘೋಷಿಸಿದ್ದಾರೆ.
ಪತ್ಮಿ ರಕ್ಷಿತಾ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಚಿತ್ರತಂಡ ಅಭಿಷೇಕ್ ರಾವ್ ಚೊಚ್ಚಲ ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆ ಮಾಡಿದೆ, ರನ್ನ ಎಂಬ ಹೆಸರಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ, ನ್ಯೂಯಾರ್ಕ್ ನ ಫಿಲ್ಮ್ ಇನ್ ಸ್ಟಿಟ್ಯೂಟ್ ಮತ್ತು ರಂಗಭೂಮಿಯಲ್ಲಿ ತರಬೇತಿ ಪಡೆದಿದ್ದಾರೆ.
ದಿ ವಿಲನ್' ಸಿನಿಮಾ ನಿರ್ದೇಶನದ ನಂತರ ಈಗ ಪತ್ನಿ ರಕ್ಷಿತಾ ಅವರ ಸಹೋದರ ಅಭಿಷೇಕ್ ಅವರ ಚೊಚ್ಚಲ ಸಿನಿಮಾಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ ಪ್ರೇಮ್.
ಮುಂಬರುವ ಪ್ರೇಮ್ ಸಿನಿಮಾ ಅವರ ಹೋಮ್ ಬ್ಯಾನರ್‌ನನಲ್ಲಿಯೇ ಮೂಡಿ ಬರಲಿದೆ. ಅವರದೇ ನಿರ್ಮಾಣ ಸಂಸ್ಥೆಯಾದರೂ ಅದಕ್ಕೆ 'ಪ್ರೇಮ್ ಪಿಕ್ಚರ್ಸ್' ಎನ್ನುವ ಹೆಸರು ಇರುವುದಿಲ್ಲ. ಯಾಕೆಂದರೆ, 'ಪ್ರೇಮ್ ಪಿಕ್ಚರ್ಸ್' ಬದಲು 'ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ' ಹೆಸರಿನ ನಿರ್ಮಾಣ ಸಂಸ್ಥೆಯಲ್ಲಿ ಪ್ರೇಮ್ ತಮ್ಮ ಮುಂಬರುವ ಸಿನಿಮಾ ಮಾಡಲಿದ್ದಾರೆ.
ಪ್ರೇಮ್ ನಿರ್ದೇಶನದ ಈ ಸಿನಿಮಾ ಟೈಟಲ್ ಕುತೂಹಲ ಮೂಡಿಸಿದೆ, ಏಕಲವ್ಯ ಮತ್ತು ಏಕ್ ಲವ್ ಯ ಎಂಬ ಟೈಟಲ್ ಇದಾಗಿದೆ, ರೊಮ್ಯಾಂಟಿಕ್ ಸಿನಿಮಾ ಆಗಿರುವ ಈ ಸಿನಿಮಾ ಟೈಟಲ್ ಟ್ಯಾಗ್ ಲೈನ್, ಎಲ್ಲರಿಗೂ ಪ್ರೀತಿ ಬೇಕು ಎಂಬುದಾಗಿದೆ, ಇದೊಂದು ನೈತ ಕಥೆಯಾಧಾರಿತ ಸಿನಿಮಾ ಇದಾಗಿದೆ, ಇನ್ನೂ ನಾಯಕಿಯ ಹುಡುಕಾಟ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


