ಗೌತಮ್ ಅಯ್ಯರ್ 'ವೃತ್ರ'ದಲ್ಲಿ ರಶ್ಮಿಕಾ ಮಂದಣ್ಣ ಜಾಗಕ್ಕೆ ನಿತ್ಯಶ್ರೀ
ಗೌತಮ್ ಅಯ್ಯರ್ ನಿರ್ದೇಶನದ ವೃತ್ರ ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರಬಂದದ್ದು ಹಳೆ ಸುದ್ದಿ. ಇದೀಗ ...

ಗೌತಮ್ ಅಯ್ಯರ್ ನಿರ್ದೇಶನದ ವೃತ್ರ ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರಬಂದದ್ದು ಹಳೆ ಸುದ್ದಿ. ಇದೀಗ ಅವರ ಜಾಗಕ್ಕೆ ನಟಿ ನಿತ್ಯಶ್ರೀ ಆಗಮನವಾಗಿದೆ. ಚೆನ್ನೈಯಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದ ನಿತ್ಯಶ್ರೀ ಕನ್ನಡತಿ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಮುಗಿಸಿದ ಇವರು ರಂಗಭೂಮಿ ಹಿನ್ನಲೆಯವರು. 250ಕ್ಕೂ ಅಧಿಕ ಸ್ಟೇಜ್ ಶೋಗಳನ್ನು ಮಾಡಿದ್ದಾರೆ.
ಕಲಾವಿದೆಯಾಗಿ ನೃತ್ಯಗಾರ್ತಿಯಾಗಿ ಮಾತ್ರವಲ್ಲದೆ ನಿತ್ಯಶ್ರೀ ತಾಂತ್ರಿಕವಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅನೇಕ ಫ್ಯಾಶನ್ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ. ಇದು ಅವರು ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿರುವ ಮೊದಲ ಚಿತ್ರವಾಗಿದ್ದು ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಮಿಳಿನಲ್ಲಿ ಮಣಿರತ್ನಂ ಅವರ ನಿರ್ದೇಶನದ ಕಾಟ್ರು ವೆಲಿಯಿದೈ ಚಿತ್ರದಲ್ಲಿ ನಟ ಕಾರ್ತಿಕ್ ನ ಸೋದರಿ ಪಾತ್ರವನ್ನು ಮಾಡಿದ್ದರು. ಬೆಜೊಯ್ ನಂಬಿಯಾರ್ ಅವರ ಸೋಲೊ ಚಿತ್ರದಲ್ಲಿ ದಲ್ಖಾರ್ ಸಲ್ಮಾನ್ ಜೊತೆ ನಟಿಸಿದ್ದಾರೆ. ಸೆಟ್ ನಲ್ಲಿ ನಿರ್ದೇಶಕರಿಗೆ ಸಹಾಯಕಿಯಾಗಿ ಕೆಲಸ ಮಾಡಿದ ಅನುಭವ ಕೂಡ ಇದೆ ಎನ್ನುತ್ತಾರೆ ನಿತ್ಯಶ್ರೀ.
ಅಂತಿಮ ಕ್ಷಣದಲ್ಲಿ ರಶ್ಮಿಕಾ ಮಂದಣ್ಣ ಚಿತ್ರದಿಂದ ಏಕೆ ಹೊರಬಂದರು ಎಂದು ಗೊತ್ತಿಲ್ಲ ಎನ್ನುತ್ತಾರೆ ನಿತ್ಯಶ್ರೀ. ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ನನಗೆ ಚಿತ್ರದ ಕಥೆ ಮತ್ತು ವಿಷಯ ಇಷ್ಟವಾಗಿದೆ. ಇದು ಹೊಸ ತಲೆಮಾರಿನ ಕಮರ್ಷಿಯಲ್ ಚಿತ್ರವಾಗಿದೆ ಎಂದು ಹೊಗಳಿದರು.
ಚಿತ್ರಕ್ಕೆ ಆದಿ ಫೊಟೊಗ್ರಫಿ ಎಂದು ಹೆಸರಾಗಿರುವ ಆದಿ ವೆಂಕಟೇಶ್ ಕ್ಯಾಮರಾ ಒದಗಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


