ಸಿನಿಮಾ ಸುದ್ದಿ

ಪಿ.ವಾಸು ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣಗೆ ರಚಿತಾ ರಾಮ್ ನಾಯಕಿ?

ದ್ವಾರಕೀಶ್ ಚಿತ್ರ ಬ್ಯಾನರ್​ನ 52ನೇ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ನಟಿಸುತ್ತಿದ್ದು ದಕ್ಷಿಣ ಭಾರತದ ಖ್ಯಾತ ನಿರ್ದೇಶಕರ ಪಿ,ವಾಸು ನಿರ್ದೇಶಿಸಲಿದ್ದಾರೆ....

ಪಿ.ವಾಸು ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣಗೆ ರಚಿತಾ ರಾಮ್ ನಾಯಕಿ?
ಶಿವರಾಜ್ ಕುಮಾರ್ ಮತ್ತು ರಚಿತಾ ರಾಮ್
Published On :
ಬೆಂಗಳೂರು: ದ್ವಾರಕೀಶ್ ಚಿತ್ರ ಬ್ಯಾನರ್​ನ 52ನೇ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ನಟಿಸುತ್ತಿದ್ದು ದಕ್ಷಿಣ ಭಾರತದ ಖ್ಯಾತ ನಿರ್ದೇಶಕರ ಪಿ,ವಾಸು ನಿರ್ದೇಶಿಸಲಿದ್ದಾರೆ.
ಈ ಹಿಂದೆ ಡಾ, ರಾಜ್ ಕುಮಾರ್ ದ್ವಾರಕೀಶ್ ಚಿತ್ರದ ಬ್ಯಾನರ್ ಗಳಲ್ಲಿ ನಟಿಸಿದ್ದಾರೆ 45 ವರ್ಷಗಳ ನಂತರ ಮತ್ತು  ಶಿವರಾಜ್ ಕುಮಾರ್ ದ್ವಾರಕೀಶ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಶಿವಣ್ಣಗೆ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಮಾತುಕತೆ ಮುಗಿದಿದ್ದು ಸಹಿ ಮಾಡುವುದಷ್ಟೇ ಬಾಕಿಯಿದೆ, ನಂತರ ನಿರ್ಮಾಪಕರೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರುಸ್ತುಂ ಚಿತ್ರದಲ್ಲೂ ರಚಿತಾ ನಟಿಸುತ್ತಿದ್ದು, ಅದರಲ್ಲಿ ವಿವೇಕ್ ಓಬೇರಾಯ್ ಗೆ ನಾಯಕಿಯಾಗಲಿದ್ದಾರೆ.  ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರಚಿತಾ ರಾಮ್ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರಲಿದೆ, ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ.
ಇನ್ನೂ ಶಿವರಾಜ್ ಕುಮಾರ್ ಮತ್ತು ವಾಸು 2ನೇ ಬಾರಿಗೆ ಮತ್ತೆ ಒಂದಾಗುತ್ತಿದ್ದಾರೆ, ದ್ವಾರಕೀಶ್​ ಬ್ಯಾನರ್​ನ ಸೂಪರ್​ ಹಿಟ್ ಸಿನಿಮಾ ಆಪ್ತಮಿತ್ರ ಡೈರೆಕ್ಟ್​ ಮಾಡಿದ್ದ, ಪಿ.ವಾಸು ಈಗ ಶಿವಣ್ಣನಿಗೆ ಮತ್ತೆ ಆ್ಯಕ್ಷನ್​ ಕಟ್​ ಹೇಳೊಕೆ ರೆಡಿಯಾಗಿದ್ದಾರೆ. ಈ ಹಿಂದೆ ಪಿ.ವಾಸು ಡೈರೆಕ್ಷನ್​ನಲ್ಲಿ ಶಿವಣ್ಣ ನಟಿಸಿದ್ದ ಶಿವಲಿಂಗ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈ ಮೆಗಾ ಕಾಂಬಿನೇಷನ್​ ಈಗ ಮತ್ತೆ ಒಂದಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗೇ ಇಟ್ಟುಕೊಳ್ಳಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.