ಸಿನಿಮಾ ಸುದ್ದಿ

ಸುಹಾಸಿನಿಯವರ ಸರಳತೆಗೆ ಸ್ಪೂರ್ತಿದಾಯಕವಾದದ್ದು; ಶೃತಿ ಹರಿಹರನ್

ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದಲ್ಲಿ ಶೃತಿ ಹರಿಹರನ್ ಇದೇ ಮೊದಲ...

ಸುಹಾಸಿನಿಯವರ ಸರಳತೆಗೆ ಸ್ಪೂರ್ತಿದಾಯಕವಾದದ್ದು; ಶೃತಿ ಹರಿಹರನ್
ಶೃತಿ ಹರಿಹರನ್
Published On :

ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದಲ್ಲಿ ಶೃತಿ ಹರಿಹರನ್ ಇದೇ ಮೊದಲ ಬಾರಿಗೆ ಸುದೀಪ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೂಲಕ ಹಿರಿಯ ನಟ ಅಂಬರೀಷ್ ಅವರು ಕೂಡ ಪೂರ್ಣ ಪ್ರಮಾಣದಲ್ಲಿ ಮತ್ತೆ ನಟಿಸಿದ್ದಾರೆ. ಚಿತ್ರದಲ್ಲಿ ಸುಹಾಸಿನಿ ಮಣಿರತ್ನಂ ಅವರು ಯುವತಿಯಾಗಿದ್ದಾಗಿನ ಪಾತ್ರವನ್ನು ಶೃತಿ ಹರಿಹರನ್ ನಿಭಾಯಿಸಿದ್ದಾರೆ.

ಈ ಕುರಿತು ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, '' ನಾನು ಈ ಚಿತ್ರದ ಮೂಲಕ ಹಲವು ಪ್ರಮುಖ ನಟರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ಮಾತ್ರವಲ್ಲದೆ 80ರ ದಶಕಕ್ಕೆ ಹೋಗಿದ್ದೆ. ಬೆಂಗಳೂರಿನಲ್ಲಿ ಬೆಳೆದ ನಾನು ಈ ಚಿತ್ರದಲ್ಲಿ ಸಣ್ಣ ಪಟ್ಟಣದ ಹುಡುಗಿ ಸಿಟಿ ಜೀವನಕ್ಕೆ ಹೇಗೆ ಹೊಂದಿಕೊಳ್ಳುತ್ತಾಳೆ ಎಂಬುದನ್ನು ತೋರಿಸಲಾಗಿದೆ'' ಎಂದರು.

ಸುದೀಪ್ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಅವರು ಮಾತನಾಡಿ, ಸುದೀಪ್ ಅವರು ಕೂಡ ಚಿತ್ರದಲ್ಲಿ ಕೆಲವು ಭಾಗಗಳನ್ನು ನಿರ್ದೇಶನ ಮಾಡಿದರು. ಅವುಗಳಲ್ಲಿ ನನ್ನ ದೃಶ್ಯ ಕೂಡ ಒಂದು. ಅದು ತುಂಬಾ ತೀವ್ರತೆಯ ಮತ್ತು ಸವಾಲಿನ ನಟನೆಯಾಗಿತ್ತು. ನನ್ನ ನಟನೆಯಲ್ಲಿ ಬೇರೊಂದನ್ನು ಅವರು ಹೊರತೆಗೆದರು ಎನ್ನುತ್ತಾರೆ.

ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಮೊದಲೇ ಗುರುದತ್ತ ಗಾಣಿಗ ನನಗೆ ಪರಿಚಯವಿದ್ದರು. ಅವರು ನಿರ್ದೇಶನ ಮಾಡುತ್ತಾರೆಯೇ, ಶೂಟಿಂಗ್ ಸೆಟ್ ನ ವಾತಾವರಣ ನಿಭಾಯಿಸುತ್ತಾರೆಯೇ ಎಂದು ಎಲ್ಲರಿಗೆ ಅಚ್ಚರಿಯಾಗುತ್ತಿತ್ತು. ಆದರೆ ಒಂದು ಬಾರಿ ಕೆಲಸಕ್ಕೆ ಇಳಿದ ನಂತರ ಇಡೀ ತಂಡವನ್ನು ನಿಭಾಯಿಸುವ ಚಾಕಚಕ್ಯತೆ ಅವರಿಗಿದೆ ಎಂದರು.

Story image


ಹಲವು ಭಾಷೆಗಳಲ್ಲಿ ಸುಹಾಸಿನಿ ಅವರ ಅಭಿನಯ ನೋಡಿ ನನಗೆ ಇಷ್ಟವಾಗಿತ್ತು. ಅವರಲ್ಲಿನ ಸರಳತೆ ನನಗೆ ತುಂಬಾ ಹಿಡಿಸಿದೆ. ಚಿತ್ರೋದ್ಯಮದಲ್ಲಿರುವ ಕೆಲವೇ ಕೆಲವು ಬುದ್ಧಿವಂತ ನಟಿಯರಲ್ಲಿ ಸುಹಾಸಿನಿ ಕೂಡ ಒಬ್ಬರು. ಬರಹಗಾರ್ತಿಯಾಗಿ, ನಿರ್ದೇಶಕಿಯಾಗಿ ಸುಹಾಸಿನಿ ಮೇಡಂ ಅವರು ಹಲವು ವಿಷಯಗಳಲ್ಲಿ ಸ್ಪೂರ್ತಿಯಾಗಿದ್ದಾರೆ. ಅಂಬಿ ಚಿತ್ರದಲ್ಲಿ ಅವರ ಯುವತಿಯಾಗಿದ್ದಾಗಿನ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ಆದರೆ ನನ್ನನ್ನು ಅವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ನಾನು ಅವರಿಗೆ ಸರಿಸಾಟಿಯೇ ಅಲ್ಲ, ಈ ಪಾತ್ರಕ್ಕಾಗಿ ನಾನು ಅವರ ದೈಹಿಕ ಭಾಷೆಯನ್ನು ಕಲಿಯಲು ಅವರ ಹಲವು ಚಿತ್ರಗಳನ್ನು ನೋಡಿದೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂದು ಭಾವಿಸುತ್ತೇನೆ. ಅವರ ಕೇಶವಿನ್ಯಾಸ ಮತ್ತು ಅವರಲ್ಲಿನ ಆತ್ಮವಿಶ್ವಾಸ ನನಗೆ ಬಹಳ ಅಚ್ಚುಮೆಚ್ಚು ಎನ್ನುತ್ತಾರೆ ಶೃತಿ ಹರಿಹರನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.