'ಯಜಮಾನ' ದರ್ಶನ್ ಗೆ ಹೇಳಿ ಮಾಡಿಸಿದ ಚಿತ್ರ: ಶೈಲಜಾ ನಾಗ್
ನಟ ದರ್ಶನ್-ರಶ್ಮಿಕಾ ಮಂದಣ್ಣ ಅಭಿನಯದ ಯಜಮಾನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ...

ನಟ ದರ್ಶನ್-ರಶ್ಮಿಕಾ ಮಂದಣ್ಣ ಅಭಿನಯದ ಯಜಮಾನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ಹಾಗೂ ದರ್ಶನ್ ಅಭಿಮಾನಿಗಳ ಸಂತಸ ನೋಡಿ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಖುಷಿಯಾಗಿದ್ದಾರೆ.
ಯಜಮಾನ ಚಿತ್ರದ ಮೋಷನ್ ಪೋಸ್ಟರ್ ಸೃಷ್ಟಿ ಮಾಡಿರುವ ಹೈಪ್ ನೋಡಿದರೆ ಆಶ್ಚರ್ಯವಾಗುತ್ತದೆ, ದರ್ಶನ್ ಒಬ್ಬ ಮಾಸ್ ಹೀರೋ ಆಗಿರುವುದೇ ಇದಕ್ಕೆ ಕಾರಣ. ಇದರ ಇಡೀ ತಂತ್ರಜ್ಞಾನದ ಕಸುಬುಗಾರಿಕೆಯ ಕ್ರೆಡಿಟ್ ವಿ ಹರಿಕೃಷ್ಣ ಅವರಿಗೆ ಸಲ್ಲಬೇಕು, ಅವರು ಚಿತ್ರಕ್ಕೆ ಸಂಗೀತ ನೀಡಿದ್ದು ಮಾತ್ರವಲ್ಲದೆ ಮೋಷನ್ ಪೋಸ್ಟರ್ ಗೆ ದೃಶ್ಯವನ್ನು ಕೂಡ ಅವರೇ ಸಂಯೋಜನೆ ಮಾಡಿದವರು. ಈ ಚಿತ್ರದ ಬೆನ್ನೆಲುಬು ಅವರು ಎಂದು ಶೈಲಜಾ ಹೊಗಳಿದರು.
ಚಿತ್ರದ ತುಣುಕೊಂದು ಪ್ರೇಕ್ಷಕರಿಗೆ ಸಿಕ್ಕಿದೆ. ಚಿತ್ರದ ನಿರ್ದೇಶಕ ಪೊನ್ ಕುಮಾರ್. ''ಹಳ್ಳಿ ಮತ್ತು ನಗರದ ಹಿನ್ನಲೆಯನ್ನು ಇಟ್ಟುಕೊಂಡು ಮಾಡಿರುವ ಚಿತ್ರ ಯಜಮಾನ. ಇದೊಂದು ಕಮರ್ಷಿಯಲ್ ಮನರಂಜನಾ ಚಿತ್ರ. ಚಿತ್ರದ ಶೀರ್ಷಿಕೆ ಹೇಳುವಂತೆ ಇದು ಪ್ರತಿಯೊಬ್ಬರ ಮನಸ್ಸನ್ನು ಕೂಡ ತಟ್ಟಲಿದೆ'' ಎನ್ನುತ್ತಾರೆ ಶೈಲಜಾ ನಾಗ್.
ಗೂಳಿಯನ್ನು ಇಲ್ಲಿ ಗುರುತಾಗಿ ಬಳಸಲಾಗಿದೆ. ನಾಯಕನ ಸ್ವಭಾವ ಗೂಳಿ ತರ, ತನ್ನನ್ನು ಕೆರಳಿಸಿದರೆ ಸುಮ್ಮನೆ ಬಿಡುವುದಿಲ್ಲ, ಇಲ್ಲದಿದ್ದರೆ ಶಾಂತ ಸ್ವಭಾವದವನು ಎಂದು ತೋರಿಸಲು ಗೂಳಿಯನ್ನು ಪೋಸ್ಟರ್ ನಲ್ಲಿ ತರಲಾಗಿದೆ.
ಚಿತ್ರದಲ್ಲಿ 6 ಹೊಡೆದಾಡುವ ದೃಶ್ಯಗಳು ಮತ್ತು 5 ಹಾಡುಗಳಿವೆ. ಶೈಲಜಾ ಅವರ ಜೊತೆ ಬಿ ಸುರೇಶ್ ಕೂಡ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತನ್ಯ ಹೊಪೆ ನಾಯಕಿಯರಾಗಿದ್ದಾರೆ. ಶ್ರೀಶ ಕುಡುವಳ್ಳಿ ಅವರ ಕ್ಯಾಮರಾ ಕೈಚಳಕವಿದೆ.

ಯಜಮಾನ ಚಿತ್ರ ದರ್ಶನ್ ಅವರಿಗೆ ಹೇಳಿಮಾಡಿಸಿದಂತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲಕರ ಸಂಗತಿಗಳು ಹೊರಬರಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


