ರಣಂ ಚಿತ್ರದ ಮೂಲಕ ಕನ್ನಡ ಚತ್ರರಂಗಕ್ಕೆ ಅರ್ಬಾಜ್ ಖಾನ್ ಎಂಟ್ರಿ!
ವಿ. ಸಮುದ್ರ ನಿರ್ದೇಶನದ ಮಲ್ಟಿ ಸ್ಟಾರರ್ ಸಿನಿಮಾ ರಣಂ,ಚಿತ್ರೀಕರಣ ಹಂತದಲ್ಲಿದೆ, ಕೆ,ಆರ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಬಾಲಿವುಡ್ ನಟ ..

Published On :
ಬೆಂಗಳೂರು: ವಿ. ಸಮುದ್ರ ನಿರ್ದೇಶನದ ಮಲ್ಟಿ ಸ್ಟಾರರ್ ಸಿನಿಮಾ ರಣಂ,ಚಿತ್ರೀಕರಣ ಹಂತದಲ್ಲಿದೆ, ಕೆ,ಆರ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಚೇತನ್ ಮತ್ತು ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ,
ಮತ್ತೊಂದು ಸುತ್ತಿನ ಮಾತುಕತೆ ನಂತರ ಅರ್ಬಾಜ್ ಖಾನ್ ಗ್ರೀನ್ ಸಿಗ್ನಿಲ್ ನೀಡಲಿದ್ದಾರೆ ಎಂದು ಹೇಳಲಾಗಿದೆ, ಇನ್ನೂ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ನಿರ್ಮಾಪಕ ಆರ್ ಎಸ್ ಶ್ರೀನಿವಾಸ್ ಹೇಳಿದ್ದಾರೆ, ನಿರ್ಧಿಷ್ಟ ಪಾತ್ರವೊಂದಕ್ಕೆ ನಾವು ಅರ್ಬಾಜ್ ಖಾನ್ ಅವರ ಜೊತೆ ಮಾತುಕತೆ ನಡೆಸಿದ್ದೇವೆ, ನಮ್ಮ ಷರತ್ತುಗಳಿಗೆ ಒಪ್ಪಿದರೇ ಅರ್ಬಾಜ್ ಖಾನ್ ರಣಂ ನಲ್ಲಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ,
ರಣಂ ಸಿನಿಮಾದಲ್ಲಿ ಚೇತನ್ ಕ್ರಾಂತಿಕಾರಿ ನಾಯಕನಾಗಿ ನಟಿಸಿದ್ದಾರೆ, ಚಿರಂಜೀವಿ ಸರ್ಜಾ ಪೊಲ್ಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ, ನೀತು ಗೌಡ, ಮುಂತಾದವರು ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


