ಶೃತಿ #MeToo ಆರೋಪಕ್ಕೆ ಧ್ರುವ ಸರ್ಜಾ ಕಾರಣ? ಭಾಮಾ ಹರೀಶ್ ಪ್ರತಿಕ್ರಿಯೆ!
ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಮಾಡಿರುವ ಮೀಟೂ ಆರೋಪದ ಹಿಂದೆ ಹಳೆಯ ದ್ವೇಷ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹೇಳಿದ್ದಾರೆ.

Published On :
ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಮಾಡಿರುವ ಮೀಟೂ ಆರೋಪದ ಹಿಂದೆ ಹಳೆಯ ದ್ವೇಷ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹೇಳಿದ್ದಾರೆ.
ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಾಮಾ ಹರೀಶ್ ಸ್ಯಾಂಡಲ್ ವುಡ್ ಮೀಟೂ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ವೇಳೆ ಶೃತಿ ಮೀಟೂ ಆರೋಪಕ್ಕೆ ನಟ ಧ್ರುವ ಸರ್ಜಾ ಕಾರಣ ಎಂದು ಹೇಳಿದ್ದಾರೆ.
ಭಾಮಾ ಹರೀಶ್ ನೀಡಿರುವ ಹೇಳಿಕೆ ಅನ್ವಯ, ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಅಳಿಯ ಧೃವ ಸರ್ಜಾರೊಂದಿಗೆ ನಟಿಸುವ ಅವಕಾಶ ನೀಡಲು ಮನವಿ ಮಾಡಿದ್ದರು. ಆದರೆ ಈ ವೇಳೆ ಅವರ ಜೋಡಿ ಹಾಗೂ ವಯಸ್ಸಿನ ಹೊಂದಾಣಿಕೆ ಕಾರಣ ನೀಡಿ ಅರ್ಜುನ್ ಸರ್ಜಾ ಅವರು ಶೃತಿ ಅವರ ಮನವಿಯನ್ನು ನಿರಾಕರಿಸಿದ್ದರು. ಅಂದಿನ ದ್ವೇಷ ದೊಡ್ಡದಾಗಿ ಇಂದು ಮೀಟೂವರೆಗೂ ಬಂದಿದೆ ಎಂದು ಭಾಮಾ ಹರೀಶ್ ಗಂಭೀರ ಆರೋಪ ಮಾಡಿದರು.
ಶೃತಿ ದ್ವೇಷದಿಂದಲೇ ಈ ರೀತಿ ಆರೋಪ ಮಾಡಿದ್ದು, ಇದು ಸರಿಯಲ್ಲ. ಇಲ್ಲದ ಆರೋಪ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.
ಇನ್ನು ನಟಿ ಶೃತಿ ಕೇವಲ ಸಿನಿಮಾ ಚಾನ್ಸ್ ಗಾಗಿ ಇಂತಹ ಗಂಭೀರ ಆರೋಪ ಮಾಡುತ್ತಾರೆಯೇ ಎಂಬ ಪ್ರಶ್ನೆಯೂ ಉದ್ಭವವಾಗಿದ್ದು, ಇದೇ ಬುಧವಾರ ವಾಣಿಜ್ಯ ಮಂಡಳಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಮಾ ಹರೀಶ್ ಅವರ ಆರೋಪ, ನಟ ಚೇತನ್ ವಿರುದ್ಧದ ಆರೋಪ ಮತ್ತು ಅರ್ಜುನ್ ಆಪ್ತ ಪ್ರಶಾಂತ್ ಸಂಬರಗಿ ನೀಡಿರುವ ಹೇಳಿಕೆಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruarjun sarjaಅರ್ಜುನ್ ಸರ್ಜಾSandalwoodಸ್ಯಾಂಡಲ್ ವುಡ್Dhruva sarjaಧ್ರುವ ಸರ್ಜಾSruthi Hariharanಶೃತಿ ಹರಿಹರನ್MeTooಮೀಟೂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


