ಅರ್ಜುನ್ ಸಂಭಾವಿತ ವ್ಯಕ್ತಿ, #MeToo ಅನ್ನೋದು ದೊಡ್ಡ ರೋಗ: ಅಳಿಯನ ಬೆನ್ನಿಗೆ ನಿಂತ ನಟ ರಾಜೇಶ್
ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ನಟ ರಾಜೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Published On :
ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ನಟ ರಾಜೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಅವರನ್ನು ಸುಮಾರು ವರ್ಷಗಳಿಂದ ನೋಡುತ್ತಿದ್ದೇನೆ. ಹಿರಿಯ ಕಲಾವಿದೆಯರಪ ಜೊತೆ ಅಭಿನಯಿಸಿದ್ದಾರೆ. ಅವರ ವಿರುದ್ಧ ಒಂದೂ ದೂರು ಇಲ್ಲ. ಇದೊಂದು ರೋಗ ಶುರುವಾಗಿದೆ. 8-10 ವರ್ಷದ ಹಿಂದಿನದ್ದನ್ನು ತೆಗೆದು ರಗಳೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಅರ್ಜುನ್ ಅಂತ ಹುಡುಗ ಅಲ್ಲ. ಒಳ್ಳೆಯ ಹುಡುಗ. ಸಂಭಾವಿತ ವ್ಯಕ್ತಿ ನಮ್ಮ ಅರ್ಜುನ್. ಇನ್ನೊಬ್ಬರ ಬಗ್ಗೆ ಕೆಣಕೋದಾಗಲಿ, ಆಪಾದನೆ ಮಾಡೋದಾಗಲಿ ಅಥವಾ ಕಾಮುಕ ದೃಷ್ಟಿಯಿಂದ ನೋಡೋದಾಗಲಿ ಸರಿಯಲ್ಲ ಎಂದು ಶೃತಿ ವಿರುದ್ಧ ರಾಜೇಶ್ ಕೆಂಡಾಮಂಡಲರಾಗಿದ್ದಾರೆ.
ಇವರೆಲ್ಲ ನಿನ್ನೆ-ಮೊನ್ನೆ ಬಂದ ನಟಿಯರು. ಇವರಿಗೆ ಸರಿಯಾಗಿ ಕನ್ನಡ ಮಾತಾಡೋಕೆ ಬರಲ್ಲ. ಇವರೆಲ್ಲ ಅರ್ಜುನ್ ಮೇಲೆ ಏನು ಆಪಾದನೆ ಮಾಡೋದು. ಇವಳ ಮೇಲೆ ಕೇಸ್ ಹಾಕಿ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
arjun sarjaಅರ್ಜುನ್ ಸರ್ಜಾSandalwoodಆರೋಪShruthi Hariharanಶೃತಿ ಹರಿಹರನ್Rajeshರಾಜೇಶ್MeTooAlegationಮೀ ಟೂ - ಸ್ಯಾಂಡಲ್ವುಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


