ಸಿನಿಮಾ ಸುದ್ದಿ

ರುಸ್ತುಂಗಾಗಿ ಸಾಕ್ಷಿ ಚೌಧರಿ ಕರೆತಂದ ನಿರ್ದೇಶಕ ರವಿವರ್ಮ

ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿಯಾಗಿರುವ ಸಾಕ್ಷಿ ಚೌಧರಿ ಮೊದಲ ಬಾರಿಗೆ ರುಸ್ತುಂ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ರುಸ್ತುಂಗಾಗಿ ಸಾಕ್ಷಿ ಚೌಧರಿ ಕರೆತಂದ ನಿರ್ದೇಶಕ ರವಿವರ್ಮ
ಸಾಕ್ಷಿ ಚೌಧರಿ
Published On :
ಬೆಂಗಳೂರು: ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿಯಾಗಿರುವ ಸಾಕ್ಷಿ ಚೌಧರಿ ಮೊದಲ ಬಾರಿಗೆ ರುಸ್ತುಂ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 
ತಾರಾಗಣದ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುವ ಶಿವರಾಜ್​ಕುಮಾರ್ ನಟನೆಯ ‘ರುಸ್ತುಂ’ ಸಿನಿಮಾ ಬಳಗಕ್ಕೆ ಇನ್ನು ಕೆಲವು ಖ್ಯಾತನಾಮರು ಸೇರ್ಪಡೆಗೊಂಡಿದ್ದಾರೆ. ಟಾಲಿವುಡ್​ನಲ್ಲಿ ಹಲವು ಸಿನಿಮಾ ಮಾಡಿರುವ ನಟಿ ಸಾಕ್ಷಿ ಚೌಧರಿ ‘ರುಸ್ತುಂ’ ಟೀಮ್ ಗೆ ಹೊಸದಾಗಿ ಆಗಮಿಸಿದ್ದಾರೆ. 
ಕಂಠೀರವ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಕಲರ್​ಫುಲ್ ಆಗಿ ಹಾಡನ್ನು ಛಾಯಾಗ್ರಾಹಕ ಮಹೇನ್ ಸಿಂಹ ಸೆರೆಹಿಡಿಯುತ್ತಿದ್ದಾರೆ. ಸಾಕ್ಷಿ ಚೌಧರಿ ಕುಣಿಯುತ್ತಿರುವುದೊಂದೇ ಈ ಹಾಡಿನ ವಿಶೇಷತೆ ಅಲ್ಲ. ಮತ್ತೆ? ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ ಈ ಐಟಂ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. 
ನಿರ್ದೇಶಕ ಎ. ಪಿ ಅರ್ಜುನ್ ಹಾಡಿಗೆ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಈಗಾಗಲೇ ಹಾಡಿನ ಚಿತ್ರೀಕರಣ ಶುರುವಾಗಿದೆ. ಇನ್ನೆರಡು ದಿನದಲ್ಲಿ ಶೂಟಿಂಗ್ ಮುಗಿಸಿಕೊಂಡು ಹಬ್ಬಕ್ಕೆ ಕೊಂಚ ಗ್ಯಾಪ್ ತೆಗೆದುಕೊಳ್ಳಲಿದೆ ‘ರುಸ್ತುಂ’ ತಂಡ. ಈಗಾಗಲೇ ರಚಿತಾ ರಾಮ್ ಶ್ರದ್ಧಾ ಶ್ರೀನಾಥ್, ಮಯೂರಿ ತಾರಾಗಣದಲ್ಲಿದ್ದು, ಬಾಲಿವುಡ್ ನಟ ವಿವೇಕ್ ಓಬೇರಾಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಬ್ಬಿನ ಹಾಲ್ ಮಾರೋಕೆ ಮಂಡ್ಯದಿಂದ ಬಂದಿದ್ದೀನಿ, ಎಂಬ ಸಾಹಿತ್ಯವನ್ನು ಎಪಿ ಅರ್ಜುನ್ ಬರೆದಿದ್ದಾರೆ.ಗಂಟ ವೆಂಕಟ ಲಕ್ಷ್ಮಿ ಅವರಿಂದ ಹಾಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನಿರ್ದೇಶಕ ರವಿವರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.