ಚೊಚ್ಚಲ ಚಿತ್ರದಲ್ಲೇ ಶಾರುಖ್ ಖಾನ್ 'ರೆಡ್ ಚಿಲ್ಲಿಸ್' ಜತೆ ನಿರ್ದೇಶಕ ವಿನಯ್ ಕೆಲಸ!
ಮುಂದಿನ ನಿಲ್ದಾಣ ಚಿತ್ರದೊಂದಿಗೆ ವಿನಯ್ ಭಾರದ್ವಾಜ್ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದು ಮೊದಲ ಚಿತ್ರದಲ್ಲಿ ಶಾರುಖ್ ಖಾನ್ ರ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ದೊಡ್ಡ ಸಂಸ್ಥೆ...

Published On :
ಮುಂದಿನ ನಿಲ್ದಾಣ ಚಿತ್ರದೊಂದಿಗೆ ವಿನಯ್ ಭಾರದ್ವಾಜ್ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದು ಮೊದಲ ಚಿತ್ರದಲ್ಲಿ ಶಾರುಖ್ ಖಾನ್ ರ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ದೊಡ್ಡ ಸಂಸ್ಥೆ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.
ಕನ್ನಡದ ನಿರ್ದೇಶಕರೊಬ್ಬರು ಮುಂಬೈ ಮೂಲದ ರೆಡ್ ಚಿಲ್ಲಿಸ್ ಜೊತೆ ಕೆಲಸ ಮಾಡುತ್ತಿರುವ ಮೊದಲ ಚಿತ್ರವವಾಗಿದೆ. ಇನ್ನು ಚಿತ್ರದ ತಾರಾಗಣವನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರೆ.
ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ ಚಿತ್ರದ ನಾಯಕ ಪ್ರವೀಣ್ ತೇಜ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನೀರ್ ದೋಸೆ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಅನನ್ಯ ಕಶ್ಯಪ್ ಈ ಚಿತ್ರದ ಮೂಲಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನವೆಂಬರ್ ನಲ್ಲಿ ಚಿತ್ರ ಸೆಟ್ಟೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶಾರುಖ್ ಖಾನ್Shah Rukh KhanSandalwoodಸ್ಯಾಂಡಲ್ವುಡ್Mundina Nildanaಮುಂದಿನ ನಿಲ್ದಾಣVinay BharadwajRed Chilliesವಿನಯ್ ಭಾರದ್ವಾಜ್ರೆಡ್ ಚಿಲ್ಲಿಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


