ಕುತೂಹಲ ಮೂಡಿಸಿದ ಬಿಗ್ ಬಾಸ್ ಕನ್ನಡ ಸೀಸನ್ 6 ಸಂಭಾವ್ಯ ಸ್ಪರ್ಧಿಗಳ ಪಟ್ಟಿ! ಗಡ್ಡಪ್ಪ, ಪುಟ್ಟಗೌರಿ?
ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 6 ಇನ್ನೇನು ಕೆಲವೇ ವಾರಗಳಲ್ಲಿ ಪ್ರಸಾರವಾಗಲಿದ್ದು ಇದೀಗ ಬಿಗ್ ಬಾಸ್ ಮನೆಯಲ್ಲಿ ಯಾವ...

Published On :
ಬೆಂಗಳೂರು: ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 6 ಇನ್ನೇನು ಕೆಲವೇ ವಾರಗಳಲ್ಲಿ ಪ್ರಸಾರವಾಗಲಿದ್ದು ಇದೀಗ ಬಿಗ್ ಬಾಸ್ ಮನೆಯಲ್ಲಿ ಯಾವ ಯಾವ ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ತಿಥಿ ಚಿತ್ರದಲ್ಲಿ ಅಭಿನಯಿಸಿದ್ದ ಗಡ್ಡಪ್ಪ ಖ್ಯಾತಿಯ ಚೆನ್ನೇಗೌಡ ಅವರು ಈ ಬಾರಿ ಬಿಗ್ ಬಾಸ್ ಅಂಗಳಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹೊರಬಿದ್ದಿದ್ದು ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ವಿಷ್ಣುವರ್ಧನ ಚಿತ್ರದಲ್ಲಿ ಸುದೀಪ್ ಜತೆಗೆ ಅಭಿನಯಿಸಿದ್ದ ಭಾವನಾ ಸಹ ಈ ಬಾರಿ ಬಿಗ್ ಬಾಸ್ ಗೆ ಬರುತ್ತಾರಂತೆ.
ಇದೇ ವೇಳೆ, ಚಿತ್ರರಂಗದಿಂದ ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ, ಸುಮನ್ ರಂಗನಾಥ್, ಮಾಡೆಲ್ ಶಾಲಿನಿ ಗೌಡ, ಪುಟ್ಟಗೌರಿ ಖ್ಯಾತಿ ರಂಜನಿ ರಾಘವನ್, ಪ್ರೇಮ ಪ್ರಕರಣದ ಮೂಲಕ ಸುದ್ದಿ ಮಾಡಿದ್ದ ಪ್ರೇಮಾ ಕುಮಾರಿ, ಲೂಸಿಯಾ ಚಿತ್ರದ ಹಾಡುಗಳ ಮೂಲಕ ಖ್ಯಾತಿ ಗಳಿಸಿರುವ ನವೀನ್ ಸಜ್ಜು, ಒಗ್ಗರಣೆ ಡಬ್ಬಿಯ ಮುರಳಿ, ಮಾತಿನ ಪಟಾಕಿ ನಿರೂಪಕಿ ಹೇಮಾ ಬಿಗ್ ಬಾಸ್ ಮನೆಗೆ ಬರುವ ಸಂಭಾವ್ಯ ಸ್ಪರ್ಧಿಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bigg BossSudeepಸುದೀಪ್ಬಿಗ್ ಬಾಸ್contestantsಸ್ಪರ್ಧಿಗಳುGaddappaಗಡ್ಡಪ್ಪKannada Season 6Puttagowriಕನ್ನಡ ಸೀಸನ್ 6ಪುಟ್ಟಗೌರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


