ಜಾತಿ ಬಣ್ಣ ಹಚ್ಚಬೇಡಿ, ವೀರ ಮದಕರಿ ವಿವಾದಕ್ಕೆ ನವರಸ ನಾಯಕ ಜಗ್ಗೇಶ್ ಕೊಟ್ಟ ತಿರುಗೇಟು!
ಚಿತ್ರದುರ್ಗದ ವೀರ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಚಿತ್ರ ನಿರ್ಮಾಣ ಮತ್ತು ನಟನೆಯ ವಿಚಾರವಾಗಿ ಸ್ಯಾಂಡಲ್ವುಡ್ ನ ಖ್ಯಾತ...

Published On :
ಬೆಂಗಳೂರು: ಚಿತ್ರದುರ್ಗದ ವೀರ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಚಿತ್ರ ನಿರ್ಮಾಣ ಮತ್ತು ನಟನೆಯ ವಿಚಾರವಾಗಿ ಸ್ಯಾಂಡಲ್ವುಡ್ ನ ಖ್ಯಾತ ನಟರಾದ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಏರ್ಪಟ್ಟಿರುವ ಪ್ರತಿಷ್ಠೆಯ ಕಾದಾಟ ಜಾತಿಯ ಆಯಾಮ ಪಡೆದುಕೊಂಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಹಿರಿಯ ನಟ ಜಗ್ಗೇಶ್ ಶಾರದಾಂಬೆಯ ಮಡಿಲಲ್ಲಿ ಜಾತಿ ಎಂಬುದು ಇರಬಾರದು. ಕಲೆಗೆ ಜಾತಿಯಿಲ್ಲ. ವಿಶ್ವದಲ್ಲೆ ಜಾತಿ ಇಲ್ಲದೆ ಒಂದೆ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು! ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ! ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತಬುದ್ಧಿ! ಎಚ್ಚರವಾಗಿರಿ ಕಲಾಬಂಧುಗಳೆ..!! ಎಂದು ಟ್ವೀಟ್ ಮಾಡಿದ್ದಾರೆ.
ವೀರ ಮದಕರಿ ಚಿತ್ರ ನಿರ್ಮಾಣ ಕುರಿತು ಮಾತನಾಡಿದ್ದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ನಾಯಕ ಸಮುದಾಯದ ಸುದೀಪ್ ಅವರೇ ವೀರ ಮದಕರಿ ಸಿನಿಮಾ ಮಾಡಬೇಕು. ದರ್ಶನ್ ಸೇರಿದಂತೆ ಬೇರೆ ಯಾರಾದರೂ ಮಾಡಿದರೆ, ಈ ಸಿನಿಮಾವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodಜಗ್ಗೇಶ್DarshanSudeepಸುದೀಪ್ದರ್ಶನ್Jaggeshಸ್ಯಾಂಡಲ್ವುಡ್Valmiki CommuninitySharadambeವಾಲ್ಮಿಕಿ ಸಮುದಾಯಶಾರದಾಂಬೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


